ಮುಂಬೈ: ಬ್ಯಾಂಕ್’ನಲ್ಲಿ ಖಾತೆ ಹೊಂದಿಲ್ಲದಿದ್ದರೂ ಎಟಿಎಂನಿಂದ ಹಣ ಪಡೆಯುವ ಸೌಲಭ್ಯ ಇನ್ನು ಮುಂದೆ ಸಿಗಲಿದೆ. ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಈ ಮಹತ್ವದ ಸೌಲಭ್ಯವನ್ನ ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಬಹುತೇಕ ಎಲ್ಲಾ ಬ್ಯಾಂಕುಗಳು ಈ ಸೌಲಭ್ಯವನ್ನ ತಮ್ಮ ಗ್ರಾಹಕರಿಗೆ ನೀಡುವ ಸಾಧ್ಯತೆ ಇದೆ.
“ಇನ್ಸ್’ಟೆಂಟ್ ಮನಿ ಟ್ರಾನ್ಸ್’ಫರ್” ಎಂದು ಕರೆಯಲಾಗುವ ಈ ಸೇವೆ ಸದ್ಯಕ್ಕೆ ಬ್ಯಾಂಕ್ ಆಫ್ ಇಂಡಿಯಾ ಮಾತ್ರವೇ ಆರಂಭಿಸಿದೆ. ಈ ಬ್ಯಾಂಕ್’ನ ನಿರ್ದಿಷ್ಟ ಎಟಿಎಂಗಳಲ್ಲಿ ಮಾತ್ರ ಈ ಐಎಂಟಿ ಸೌಲಭ್ಯ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಬ್ಯಾಂಕ್’ಗಳೂ ಕೂಡ ಇನ್ಸ್’ಟೆಂಟ್ ಮನಿ ಟ್ರಾನ್ಸ್’ಫರ್ ಸೌಲಭ್ಯ ಆರಂಭಿಸಲಿವೆ.

atm

ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರು ಹಣ ಪಾವತಿಯಾಗಬೇಕಾದ ವ್ಯಕ್ತಿಯ ವಿಳಾಸ, ಹೆಸರು, ಮೊಬೈಲ್ ನಂಬರ್ ಅನ್ನು ಬ್ಯಾಂಕ್’ನ ಎಟಿಎಂ ಮೂಲಕ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯದಲ್ಲಿ ನಮೂದಿಸಬೇಕು. ಆಗ ಸಂಬಂಧಪಟ್ಟ ವ್ಯಕ್ತಿಗೆ ನಿರ್ದಿಷ್ಟ ಸಂದೇಶವೊಂದು ರವಾನೆಯಾಗುತ್ತದೆ. ಇದನ್ನಾಧರಿಸಿ ಆ ವ್ಯಕ್ತಿ ನಿರ್ದಿಷ್ಟ ಎಟಿಎಂಗೆ ಹೋಗಿ ಮೊಬೈಲ್ ನಲ್ಲಿ ಬಂದಿರುವ ನಂಬರ್ ಬಳಸಿ ಹಣವನ್ನು ಪಡೆಯಬಹುದು. ಬಳಿಕ, ಮೊಬೈಲ್ ಫೋನ್’ಗೆ ಹಣ ಸ್ವೀಕಾರವಾದ ಕೆಲ ವಿವರಗಳಿರುವ ಸಂದೇಶ ಬರುತ್ತದೆ. ಹಣ ಕಳುಹಿಸಿದ ಬ್ಯಾಂಕ್ ಗ್ರಾಹಕ ಪ್ರತೀ ವಹಿವಾಟಿನಲ್ಲಿ 25 ರುಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.

By suddi9

Leave a Reply

Your email address will not be published. Required fields are marked *