ಮೂಡುಬಿದರೆ: ಶಿರ್ತಾಡಿ ಗ್ರಾ.ಪಂ ವ್ಯಾಪ್ತಿಯ ಕಜೆ ಎಂಬಲ್ಲಿ ಭಾನುವಾರ ಸುರಿದ ಗಾಳಿ ಮಳೆಗೆ 4 ಮನೆಗಳಗೆ ಹಾನಿಯಾಗಿವೆ.
ಕಜೆ ನಿವಾಸಿ ಅಬ್ದುಲ್ ರಜಾಕ್ ಎಂಬವರ ಮನೆಯ ಹೆಂಚು, ಸಿಮೆಂಟ್ ಸೀಟು, ಪಕ್ಕಾಸು ಸಹಿತ ಸುಮಾರು 30 ಸಾವಿರ ಮೌಲ್ಯದ ಪರಿಕರಗಳು ಹಾನಿಗೊಳಗಾಗಿದೆ.

ಪರಿಸರದ ಇತರ ಮೂರು ಮನೆಗಳ ಸಿಮೆಂಟ್ ಸೀಟುಗಳು ಗಾಳಿಮಳೆಗೆ ಹಾನಿಗೊಳಗಾಗಿವೆ. ಶಿರ್ತಾಡಿ ಗ್ರಾ.ಪಂ ಅಧ್ಯಕ್ಷ ಲಕ್ಷ್ಮಣ್ ಸುವರ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
