ಮೂಡುಬಿದರೆ: ಇಲ್ಲಿನ ಪುರಸಭೆ ವ್ಯಾಪ್ತಿಯ ಅಲಂಗಾರಿನ ಚಂದ್ರಪುರದಲ್ಲಿ ಒಂದು ಮನೆ ಹಾಗೂ ಆಶ್ರಯ ಕಾಲನಿಯ 3 ಮನೆಗಳು ಭಾನುವಾರ ಸಂಜೆ ಸುರಿದ ಗಾಳಿ ಮಳೆಗೆ ಹಾನಿಗೊಳಗಾಗಿವೆ,.


ಅಲಂಗಾರು ಚಂದ್ರಪುರದ ಸರಸ್ವತಿ ಶೆಟ್ಟಿಗಾರ ಎಂಬವರ ಮನೆಗೆ ಬೋಗಿ ಮರ ಬಿದ್ದು, ಸುಮಾರು 40 ಸಾವಿರದ ವೆಚ್ಚದ ಪಕ್ಕಾಸು, ಹೆಂಚುಗಳು ಹಾನಿಗೊಳಗಾಗಿವೆ. ಅಲಂಗಾರು 5 ಸೆಂಟ್ಸ್ ಆಶ್ರಯ ಕಾಲನಿಯಲ್ಲಿರುವ 3 ಮನೆಗಳ ಸಿಮೆಂಟ್ ಸೀಟುಗಳು ಕೂಡ ಗಾಳಿ ಮಳೆಗೆ ಹಾರಿಹೋಗಿವೆ.

