ಪೂಂಜಾಲ್‍ಕಟ್ಟೆ : ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿಯಲ್ಲಿ ಅರಳ ಗ್ರಾಮದ ಶುಂಠಿಹಿತ್ಲು-ಖಂಡದಬೆಟ್ಟು ಕಲ್ಲೇರಿ ರಸ್ತೆ ಅಭಿವೃದ್ಧಿಗೆ 218.23ಲಕ್ಷ ಅನುದಾನದ ಕಾಮಗಾರಿಗೆ ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು.
KAR_7765
ಮಂಗಳೂರು ಯೋಜನಾ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಜಯಾನಂದ ಪೂಜಾರಿ , ಸಹಾಯಕ ಇಂಜಿನಿಯರ್ ಸೂರ್ಯನಾರಾಯಣ , ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಾ.ಪಂ.ಸದಸ್ಯ ಎಫ್ರೆಂಸಿಕ್ವೇರಾ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಶಿವಪ್ರಸನ್ನ ಡಿ.ಎಂ. , ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪದ್ಮರಾಜ್ ಬಳ್ಳಾಲ್ , ಅರಳ ಗ್ರಾ.ಪಂ.ಸದಸ್ಯರಾದ ಲಕ್ಷ್ಮೀಧರ ಶೆಟ್ಟಿ , ಅಶ್ರಫ್ ಎಂ.ಬಿ, ಡೊಂಬಯ ಬಿ., ಮಹಮ್ಮದ್ ಹನೀಫ್, ವಲಯ ಕಾಂಗ್ರೆಸ್ ಅಧ್ಯಕ್ಷ ಅಶ್ರಫ್ ಕುಟ್ಟಿಕಳ , ಎಸ್.ಡಿ.ಎಂ.ಸಿ.ಅಧ್ಯಕ್ಷ ಖಾಲಿದ್ , ಪ್ರಮುಖರಾದ ಜಗದೀಶ್ ಕೊಯಿಲ, ನಿರಂಜನ್ ಹೆಗಡೆ , ದಿವಾಕರ ಶೆಟ್ಟಿ ,ರಾಜೇಂದ್ರ ಶೆಟ್ಟಿ, ವಿಶ್ವನಾಥ ಕಲ್ಲೇರಿ , ಗುಣಪಾಲ ಶೆಟ್ಟಿ ಮುಖ್ಯ ಶಿಕ್ಷಕಿ ಗಿರಿಜಾ ,ಕೃಷ್ಣವೇಣಿ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *