ಬಂಟ್ವಾಳ: ಮಾ.7 ಮಂಗಳವಾರ 2014-15 ನೇ ಸಾಲಿನ ಎರಡನೇ ಸಮುದಾಯದತ್ತ ಶಾಲಾ ಕಾರ್ಯಕ್ರಮವು ಜರಗಿತು. ಶಾಲಾ ಮಕ್ಕಳ ಶೈಕ್ಷಣಿಕ ವಿಚಾರಗಳ ಬಗ್ಗೆ ಪೋಷಕರೊಂದಿಗೆ ಚರ್ಚಿಸಲಾಯಿತು. ಮುಖ್ಯ ಅತಿಥಿಗಳಾದ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀಯುತ ಎಂ.ಎಸ್. ಮಹಮ್ಮದ್‍ರವರು ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಬದಲಾಗಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿರಿ. ಅದೇ ನಾವು ದೇಶಕ್ಕೆ ಕೊಡುವ ಉಡುಗೊರೆ ಎಂದು ತಿಳಿಸಿದರು. ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಯುತ ಮಾಧವ ಮಾವೆಯವರು ಸಮುದಾಯ ಮತ್ತು ಶೈಕ್ಷಣಿಕ ಸಂಸ್ಥೆಯ ನಡುವಿನ ಬಾಂಧವ್ಯವೇ ಬೆಳವಣಿಗೆಗೆ ಅಡಿಪಾಯವಾಗಿದೆ. ಹಾಗಾದಾಗ ಮಾತ್ರ ಅದು ಪ್ರಗತಿಯತ್ತ ಸಾಗುತ್ತದೆ. ಪ್ರತಿದಿನ ತಮ್ಮ ಅಲ್ಪಸಮಯವನ್ನಾದರೂ ವಿದ್ಯಾರ್ಥಿಗಳ ಕಲಿಕೆಯನ್ನು ಗಮನಿಸುವಲ್ಲಿ ಮೀಸಲಿಡಿ ಹಾಗಾದಾಗ ಕಲಿಕೆಯು ಉತ್ತಮ ರೀತಿಯಲ್ಲಿ ಸಾಗುತ್ತದೆ ಎಂದು ಪೋಷಕರಿಗೆ ಸಲಹೆಯನ್ನು ನೀಡಿದರು.

02
ಸರ್ವ ಶಿಕ್ಷಣ ಅಭಿಯಾನದಿಂದ ದೊರೆತ 2ನೇ ಜೊತೆ ಸಮವಸ್ತ್ರವನ್ನು ಹಂಚಲಾಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಮೋನಪ್ಪ ಪಂಚಾಯತ್ ಸದಸ್ಯರಾದ ಶ್ರೀಯುತ ಸಂಜೀವ, ಕೊರಗಪ್ಪ ಉಪಾಧ್ಯಕ್ಷೆ ಶ್ರೀಮತಿ ಅಕ್ಷತಾರವರು ಭಾಗವಹಿಸಿದ್ದರು. ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಶಕುಂತಳಾ ಎಂ.ಬಿ ಸ್ವಾಗತಿಸಿ ಸಹಶಿಕ್ಷಕಿ ಶ್ರೀಮತಿ ಸಿಸಿಲಿಯಾ ಧನ್ಯವಾದವನ್ನಿತ್ತರು. ಸಹ ಶಿಕ್ಷಕಿ ಶ್ರೀಮತಿ ಸಂಗೀತ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಅತಿಥಿ ಶಿಕ್ಷಕಿ ಕುಮಾರಿ ಜ್ಯೋತಿ ಹಾಗೂ ಶ್ರೀಮತಿ ಗೀತಾರವರು ಸಹಕರಿಸಿದರು.

By Suddi9

Leave a Reply

Your email address will not be published. Required fields are marked *