ಪುಂಜಾಲಕಟ್ಟೆ: ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ರಝಾನಗರದಲ್ಲಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಶಿಕ್ಷಕಿಯರು ವಿದ್ಯಾರ್ಥಿಗಳು ಸಂವಿದಾನ ಶಿಲ್ಪಿಯ ಗುಣಗಾನ ಮಾಡಿ ಪುಷ್ಪನಮನ ಸಲ್ಲಿಸಿದರು.

ಶಾಲಾ ಸಂಚಾಲಕರಾದ ಶೇಕ್ ರಹ್ಮತುಲ್ಲಾ, ಮುಖ್ಯಶಿಕ್ಷಕಿ ಅನಿತಾ ಗೊಂಸಾಲ್ವಿಸ್, ಜಯಶ್ರಿಸಾಲ್ಯಾನ್, ವಿಮಲಾ, ಸಂದ್ಯಾ, ಖುರ್ಷಿದ್, ನೂರ್ಜಹಾನ್, ರಝಿಯಾ, ಮಲ್ಲಿಕಾ ಮತ್ತು ಮಮತಾ ರವರು ಹಾಜರಿದ್ದು ಸಂಧರ್ಬೋಚಿತವಾಗಿ ಮಾತನಾಡಿದರು. ಹತ್ತನೆ ತರಗತಿಯ ಸಂದೇಶ್, ದಿಲ್ಶಾದ್, ರಿಯಾ ಡಾ| ಅಂಬೇಡ್ಕರ್‍ರವರ ಸಾಧನೆಯನ್ನು ವಿವರಿಸಿದರು. ರಿಯಾ ಜೇಷ್ಮ ಕಾರ್ಯಕ್ರಮ ನಿರೂಪಿಸಿ ಮುಹಮ್ಮದ್ ತಹಸೀನ್ ವಂದಿಸಿದರು.
