ಬಜ್ಪೆ: ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ದನಕಳ್ಳತನದ ಆರೋಪಿಗಳು ಅವರ ಮನೆಯಿಂದ 7 ಸಾವಿರ ರೂ. ನಗದನ್ನು ದೋಚಿ, ಅವರ ಅಳಿಯನನ್ನು ಅಪಹರಿಸಿ ಹಲ್ಲೆ ನಡೆಸಿ ಬಜ್ಪೆ ಸಮೀಪದ ಶಾಂತಿಗುಡ್ಡೆ ಎಂಬಲ್ಲಿಗೆ ಬಿಟ್ಟ ಘಟನೆ ಬುಧವಾರ ಸಂಜೆಯ ವೇಳಗೆ ನಡೆದಿದೆ.
ಅದ್ಯಪಾಡಿಯ ಇಜ್ಜಬ್ಬ ಬ್ಯಾರಿ(80) ಹಾಗೂ ಕುಟುಂಬಿಕರು ಆರೋಪಿಗಳ ಕೃತ್ಯದಿಂದ ಕೃತ್ಯದಿಂದ ನಲುಗಿದ ವ್ಯಕ್ತಿ.
ಅದ್ಯಪಾಡಿಯ 80ರ ಹರೆಯದ ಇಜ್ಜಬ್ಬ ಬ್ಯಾರಿ ಮನೆಗೆ ಬಂದಿದ್ದ ಫಾರೂಕ್ ಹಾಗೂ ಆತನ ಸಂಗಡಿಗರು ನಿಮ್ಮ ಅಳಿಯ ಅಜರುದ್ದೀನ್ ಎಲ್ಲಿ, ಆತ ದನಗಳ್ಳತನದ ಬಗ್ಗೆ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿ ಅರೆಸ್ಟ್ ಮಾಡಿಸಿ ಜೈಲ್ಗೆ ಕಳುಹಿಸಿದ್ದಾನೆ ಅವನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ.
ಅಝರುದ್ದೀನ್ನನ್ನು ಮನೆಯಲ್ಲಿ ಹುಡಕಲೆಂದು ನುಗ್ಗಿದವರು ಕಪಾಟಿನಲ್ಲಿ ಇಟ್ಟಿದ್ದ ಏಳು ಸಾವಿರ ರೂ. ನಗದು ತೆಗೆದುಕೊಂಡಿದ್ದರು. ಆರೋಪಿಗಳು ಮನೆಯಿಂದ ಹೊರಬೀಳುವಾಗಲೇ ಅಝರುದ್ದೀನ್ ಬಂದಿದ್ದು ಅವರನ್ನು ಓಮಿನಿ ಕಾರ್ನಲ್ಲಿ ಅಪಹರಿಸಿ ಶಾಂತಿಗುಡ್ಡೆ ಎಂಬಲ್ಲಿಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ನಾವು ಜೈಲ್ನಿಂದ ಹೊರ ಬರಲು ಎರಡು ಲಕ್ಷ ರೂ. ಖ ಗಿದೆ ಈ ಹಣ ಕೊಡಬೇಕು ಇಲ್ಲದಿದ್ದರೆ ಕೊಲ್ಲುತ್ತೇವೆ ಎಂಬುದಾಗಿ ಬೆದರಿಸಿ ಬಜ್ಪೆ ಪೇಟೆಯಲ್ಲಿ ತಂದು ಬಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿಲಾಗಿದೆ. ಫಾರೂಕ್ ಈ ಹಿಂದೆ ದನಗಳವು ಪ್ರಕರಣದಲ್ಲಿ ಬಂಧಿತನಾಗಿ ಜೈಲು ಪಾಲಾಗಿದ್ದ ಆರೋಪಿಯಾಗಿದ್ದಾನೆ

By suddi9

Leave a Reply

Your email address will not be published. Required fields are marked *