ಬಂಟ್ವಾಳ: ತಾಲ್ಲೂಕಿನ ಮಾರ್ನಬೈಲು ನಿವಾಸಿ ವಿಶ್ವಕರ್ಮ ಸಮಾಜದ ಹಿರಿಯ ಉದ್ಯಮಿ ಎಸ್.ಎಂ. ಜನಾರ್ದನ ಆಚಾರ್ಯ (64) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ನಿಧನರಾದರು.
8btl-janardan acharya
ಮೃತರಿಗೆ ಪತ್ನಿ, ತಾಯಿ, ಮೂವರು ಸಹೋದರ, ಇಬ್ಬರು ಸಹೋದರಿ ಇದ್ದಾರೆ.
ಇಲ್ಲಿನ ಮಾರ್ನಬೈಲು ಬಜಾರ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಸಂಸ್ಥೆ ಸಂಸ್ಥಾಪಕರಾಗಿ ಬೀಡಿ ಮತ್ತು ಐಸ್ಕ್ರೀಮ್ ಉದ್ಯಮದ ಮೂಲಕ ಹಲವರಿಗೆ ಉದ್ಯೋಗದಾತರಾಗಿದ್ದರು. ಬಂಟ್ವಾಳ ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷರಾಗಿ, ಬಂಟ್ವಾಳ ತಾಲ್ಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾಗಿದ್ದರು.
ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದ ಮೊಕ್ತೇಸರರಾಗಿ ಸರಳತೆ ಜೀವನ ನಡೆಸಿದ್ದರು.
ಮೃತರ ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ ಸ್ಥಳೀಯ ದಾಸಬೈಲು ಎಂಬಲ್ಲಿ ನೆರವೇರಿತು.

By suddi9

Leave a Reply

Your email address will not be published. Required fields are marked *