ಮೂಡುಬಿದರೆ: ತ್ರಿಭುವನ್ ಅಟೋ ಮೋಟಿವ್ ಸ್ಪೋರ್ಟ್ಸ್ ಕ್ಲಬ್, ಬೆದ್ರ ಅಡ್ವೆಂಚರ್ ಕ್ಲಬ್ , ಜೇಸೀಐ, ಇಂಡಿಯನ್ ಮೊಟಾರ್ ಸ್ಪೋರ್ಟ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಕಲ್ಲಬೆಟ್ಟು ಮಾರಿಗುಡಿ ಬಳಿ ಪಂಚರತ್ನ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುವ ಅಟೋಕ್ರಾಸ್ 15, ಮತ್ತು ಅಟೋ ಎಕ್ಸಪೋ ಮೋಟಾರ್ ಸ್ಪೋರ್ಟ್ಸ್ ಮೀಟ್ ಹಾಗೂ ಮೊಟಾರ್ ಶೋಗೆ ಶನಿವಾರ ಚಾಲನೆ ನೀಡಲಾಯಿತು.

ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಚಾಲನೆ ನೀಡಿ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯಿಂದ ಕೊಡಲ್ಪಟ್ಟ 2 ಲಕ್ಷದ ಚೆಕ್ ಅನ್ನು ಹಸ್ತಾಂತರಿಸಿದರು.
ಸಾಂಸ್ಕೃತಿಕ, ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ಬರುತ್ತಿರುವ ಮೂಡುಬಿದರೆಯಲ್ಲಿ ಬೆದ್ರ ಅಡ್ವಂಚರ್ಸ್ ಮತ್ತು ತ್ರಿಭುವನ್ ಸಹಿತ ಜೇಸಿಐ ಕ್ಲಬ್ನವರು ರಾಜ್ಯದ ಬೇರೆ ಬೇರೆ ಅಡ್ವೆಂಚರ್ಸ್ ಅವರು ಸೇರಿಸಿಕೊಂಡು ಇಂತಹ ಮೋಟಾರು ಸ್ಪೋರ್ಟ್ಸ್ ಮೀಟ್ಗಳನ್ನು ಮಾಡಿರುವುದು ಹೆಮ್ಮೆಯ ವಿಷಯ ಎಂದರು.
ಎಪಿಎಂಸಿನ ಮಾಜಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ, ಉದ್ಯಮಿ ತಿಮ್ಮಯ್ಯ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತ್ರಿಭುವನ್ ಅಟೋ ಮೊಬೈಲ್ ಸ್ಪೋರ್ಟ್ಸ್ ಕ್ಲಬ್ನ ಸ್ಪರ್ಧೆ ಸಂಚಾಲಕ ಅಭಿಜಿತ್, ಕುಲದೀಪ್ ಚೌಟರ ಅರಮನೆ, ಪ್ರತಾಪ್ ಕುಮಾರ್, ಜೇಸೀ ಅಧ್ಯಕ್ಷ ಧಿರೇಂದ್ರ, ಹಮೀದ್ ಮತ್ತು ಬೆದ್ರ ಅಡ್ವಂಚರ್ಸ್ನ ಅಕ್ಷಯ್.ಕೆ.ಜೈನ್ ಉಪಸ್ಥಿತರಿದ್ದರು.ಚೆಂಗಪ್ಪ ಎಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು
ಸಂಜೆ ಕೋಸ್ಟಲ್ ಬೈಕರ್ಸ್ ಅವರ ಸೂಪರ್ ಬೈಕ್ ಶೋ, ಮೈಸೂರಿನ ಎಕ್ಸ್ರೈಡರ್ಸ್ ಅವರಿಂದ ಬೈಕ್ ಸ್ಟಂಟ್ ನಡೆಯಿತು. .ಪ್ರತಿಷ್ಠಿತ ದ್ವಿಚಕ್ರ ಮತ್ತು ಚತುಶ್ಚಕ್ರವಾಹನಗಳ ಉತ್ಪಾದಕ ಕಂಪೆನಿಗಳವರು, ಹಣಕಾಸು ನೆರವಿನ ಸಂಸ್ಥೆಗಳು, ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.
