ಬಂಟ್ವಾಳ: ಒಬ್ಬ ನಿಷ್ಠಾವಂತ ಅ„ಕಾರಿಯಾಗಿ ತನ್ನ ಕೆಲಸಗಳನ್ನು ಆಯಾ ದಿನವೇ ಪೂರೈಸುವ ಗುಣವನ್ನು ಹೊಂದಿರುವ ನಮ್ಮ ಸಂಘದ ನಿವೃತ್ತ ಹಿರಿಯ ಲೆಕ್ಕಪರಿಶೋಧಕಿ ಒಬ್ಬ ಕರ್ತವ್ಯ ಪರ ಚಿಂತಕಿ. ಅವರು ನಿವೃತ್ತರಾದರೂ ಅವರ ಸೇವೆಯನ್ನು ನಾವು ಬಳಸಿಕೊಳ್ಳುತ್ತೇವೆ. ಕರ್ತವ್ಯಪರ ಅ„ಕಾರಿಗಳು ಇಂದಿನ ಕಾಲಘಟ್ಟದಲ್ಲಿ ವಿರಳ ಎಂದ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ. ಆನಂದ ನುಡಿದರು.
ಅವರು ಎ. 1ರಂದು ಸೇವೆಯಿಂದ ನಿವೃತ್ತರಾದ ಸಂಘದ ಹಿರಿಯ ಲೆಕ್ಕಪರಿಶೋಧಕಿ ಲಿಲ್ಲಿ ಡಿ’ಸೋಜರಿಗೆ ಬಿ.ಸಿ.ರೋಡಿನಲ್ಲಿ ವಿದಾಯ ಸಮ್ಮಾನ ನಡೆಸಿ, ಸ್ಮರಣಿಕೆ ನೀಡಿ ಅವರ ಸೇವೆಯನ್ನು ಸ್ಮರಿಸಿ ಗೌರವಿಸಿ ಮಾತನಾಡಿದರು.
IMG_4262

IMG_4267
ಸಮ್ಮಾನಕ್ಕೆ ಉತ್ತರಿಸಿದ ನಿವೃತ್ತರು, ಸಂಸ್ಥೆ ನಮ್ಮ ಬದುಕಿಗೆ ಅನ್ನ ನೀಡಿದೆ. ಸೇವೆ ಸಲ್ಲಿಸುವಾಗ ಅನೇಕ ಸಮಸ್ಯೆಗಳು ಬರುತ್ತವೆ ಅದನ್ನು ಸಮಾನ ಮನಸ್ಕರಲ್ಲಿ ಹಂಚಿಕೊಂಡು ಪರಿಹರಿಸಿಕೊಳ್ಳುವುದರಲ್ಲಿ ಜಾಣತನವಿದೆ ಎಂದರು.
ಸುದೀರ್ಘ ಅವ„ ಸೇವೆ ಸಲ್ಲಿಸಿ ನಿವೃತ್ತಿ ಪಡೆಯುವುದು ಒಂದು ರೀತಿಯಲ್ಲಿ ಸಂಕಟದ ಅನುಭವ. ಆದರೆ ಇಂತಹ ವ್ಯವಸ್ಥೆ ಬದುಕಿಗೆ ಪೂರಕವಾಗಿ ಅಗತ ಎಂದು ನುಡಿದರು.
ವಿದಾಯ ಕೂಟದಲ್ಲಿ ಉಪಾಧ್ಯಕ್ಷ ಎಂ.ಮಹಾಬಲ ಶೆಟ್ಟಿ ವಂದಿಸಿದರು.ಕಾರ್ಯನಿರ್ವಹಣಾ„ಕಾರಿ ಜಯಪ್ರಕಾಶ್ ಕಾಮತ್ ಉಪಸ್ಥಿತರಿದ್ದರು.ಎಲ್ಲಾ ನಿರ್ದೇಶಕರು ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *