ಸುದ್ದಿ9 ಕೈಕಂಬ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಂಗಾಜೆ ಕೋರ್ದಬ್ಬು ದ್ಯೆವದ ಸೇವಾ ಸಮಿತಿಯ 2014- 2015 ರ ವಾರ್ಷಿಕ ಮಹಾ ಸಭೆಯು ಮಾ. 29ರಂದು ದೇವದಾಸ್ ಆಯೆರೆಮಾರ್ ಅವರ ಅಧ್ಯಕ್ಷತೆಯಲ್ಲಿ ದ್ವೆವಸ್ಥಾನದ ವಠಾರದಲ್ಲಿ ಜರಗಿತು. ಜಾಗದ ಗುತ್ತಿನವರಾದ ಶ್ರೀಕರ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.


ಈ ಸಭೆಯಲ್ಲಿ ಗೋಪಾಲ ಅಂಚನ್, ಚಂದ್ರಶೇಖರ ಶೆಟ್ಟಿ, ಶಶಿಧರ ಮಂಗಾಜೆ, ನಾರಾಯಣ ಬಡಕಬೈಲ್, ಶೇಖರ ಬಂಗೇರಾ ಉಪಸ್ಥಿತರಿದ್ದರು. ಬಳಿಕ ನಡೆದ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಬಳಿಕ 2015- 16ಶಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಮಿತಿಯ ಗೌರವಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ , ಅಧ್ಯಕ್ಷರಾಗಿ ಮಣಿಕಂಠಪುರದ ವಾಮನ ಸೂರ್ಲ, ಉಪಧ್ಯಕ್ಷರಾಗಿ ಅರುಣುಕುಮಾರ್ ಆಯೆರೆಮಾರ್ , ಕಾರ್ಯದಶರ್ಿಯಾಗಿ, ದೇವ್ದಾಸ್ ಆಯೆರೆಮಾರ್, ಉಪಕಾರ್ಯದರ್ಶಿಯಾಗಿ ಶೇಖರ ಬಂಗೇರಾ, ಕೋಶಾಧಿಕಾರಿಯಾಗಿ ಆಶೋಕ್ ಬಡಕಬೈಲು, ಉಪಕೋಶಾಧಿಕಾರಿಯಾಗಿ ಅಶೋಕ್ ಮಂಗಾಜೆ, ಲೆಕ್ಕಪರಿಶೋಧಕರಾಗಿ ಸುಕೇಶ್ ಚೌಟ ಬಡಕಬೈಲು, ಸಂಚಾಲಕರಾಗಿ ಕೋಟ್ಯಪ್ಪ ಪೂಜಾರಿ ಬಡಕಬೈಲು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.



