ಬಂಟ್ವಾಳ :ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ಏಲಬೆ-ಬಸ್ರ ರಸ್ತೆಗೆ ಎ.ಎಮ್.ಆರ್ ಪ್ರಾಯೋಜಿತ ರೂ.2.5ಲಕ್ಷ ಹಾಗೂ ಜಿ.ಪಂ.ಅನುದಾನದ 2.5ಲಕ್ಷ ವೆಚ್ಚದ ಕಾಂಕ್ರೀಟಿಕರಣದ ರಸ್ತೆ ಉದ್ಘಾಟನೆಯನ್ನು ಜಿಲ್ಲಾ ಪಂ.ಸದಸ್ಯೆ ಮಮತಾ ಗಟ್ಟಿ ನೆರವೇರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ , ನಾಗರಿಕ ಜಾಗೃತಿ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ್ , ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ , ಗ್ರಾ.ಪಂ.ಅಧ್ಯಕ್ಷೆ ಸುಮತಿ ಸದಾನಂದ , ಕೆ.ಡಿ.ಪಿ.ಸದಸ್ಯ ಉಮೇಶ್ ಬೋಳಂತೂರು , ತಾ.ಪಂ.ಸದಸ್ಯ ಆನಂದ ಶಂಭೂರು , ಎ.ಎಮ್.ಆರ್ ನ ಪ್ರೇಮ್ನಾಥ್ ಟಿ., ಸಂಕಪ್ಪ ಶೆಟ್ಟಿ , ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನರೆಂದ್ರ ಬಾಬು , ಜಗದೀಶ್ , ಸದಸ್ಯರಾದ ಭರತ್ ರಾಜ್ , ದಿವಾಕರ ಏಲಬೆ , ಗೋವಿಂದ ಏಲಬೆ , ಕೃಷ್ಣಪ್ಪ ನಾಟಿ ಸಚಿವರ ಆಪ್ತ ಸಹಾಯಕ ಚಂದ್ರಶೇಖರ ಪಾತೂರ್ ಉಪಸ್ಥಿತರಿದ್ದರು.
