ಮೂಡುಬಿದಿರೆ: ಮಾ10ರಂದು ಹೈಕೋಟರ್್ ಅನಿಲ್ ಲೋಬೋ ಪುರಸಭಾ ಸದಸ್ಯತ್ವ ವಜಾಗೊಳಿಸುವಂತೆ ಆದೇಶ ನೀಡಿದ್ದು, ಇದೀಗ ಹೈಕೋರ್ಟ್  ಒಂದು ತಿಂಗಳವರೆಗಿನ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ತನ್ನ ಸದಸ್ಯತ್ವ ವಜಾಗೊಳಿಸುವ ತೀರ್ಪ್  ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ  ಮೇಲ್ಮನವಿ ಸಲ್ಲಿಸಲು ಪೂರಕವಾಗುವಂತೆ ಪುರಸಭಾ ಸದಸ್ಯತ್ವ ರದ್ದು ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಅನಿಲ್ ಲೋಬೋ ಹೈಕೋರ್ಟ್ ಗೆ  ಮನವಿ ಮಾಡಿದ್ದರು.

mbd_march24_5
ಇಲ್ಲಿನ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅನಿಲ್ ಲೋಬೋ ಅವರು ತನ್ನ ಆಯ್ಕೆಯನ್ನು ಪ್ರಶ್ನಿಸಿ ಪ್ರತಿಸ್ಪರ್ಧಿ , ಜೆಡಿಎಸ್ ಅಭ್ಯರ್ಥಿ  ಕೃಷ್ಣರಾಜ ಹೆಗ್ಡೆಯವರು ಹೈಕೋರ್ಟ್ ನಲ್ಲಿ  ಅರ್ಜಿ  ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ತನ್ನ ಸದಸ್ಯತ್ವವನ್ನು ರದ್ದುಗೊಳಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಸರ್ವೊಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *