ಮೂಡುಬಿದರೆ: ಆಳ್ವಾಸ್ ಕಾಲೇಜಿನ ಶಾಂಭವಿ ಹಾಸ್ಟೆಲ್ನಿಂದ ರಶ್ಮಿ ಎನ್. ನಾಯಕ್ ( 17ವ.) ಎಂಬ ವಿದ್ಯಾರ್ಥಿನಿ ಕಾಣೆಯಾಗಿದ್ದಾರೆಂದು ವಾರ್ಡನ್ ಸ್ವಾತಿ ಮಾ.22 ರಂದು ಮೂಡುಬಿದರೆ ಠಾಣೆಗೆ ದೂರು ನೀಡಿದ್ದಾರೆ.
ಮಾ.22 ರಂದು ಆಳ್ವಾಸ್ ಕಾಲೇಜಿನ ಪ್ರಥಮ ವರ್ಷದ ಬಿ.ಎಸ್.ಸಿ. ವಿದ್ಯಾರ್ಥಿನಿಯಾಗಿದ್ದ ರಶ್ಮಿ ಎನ್.ನಾಯಕ್ ಬೆಳಿಗ್ಗೆ ಸುಮಾರು 11.ಗಂಟೆಗೆ ಔಟಿಂಗ್ಗೆ ಹೋದವರು ಮರಳಿ ಹಾಸ್ಟೆಲ್ಗೆ ಬಾರದೇ ಕಾಣೆಯಾಗಿದ್ದರು.
ಈಕೆ ಶಿವಮೊಗ್ಗ ಜಿಲ್ಲೆಯ ಚಂದ್ರಮರಿನ ಕೊಪ್ಪಲ ಸುಭಾಷ್ ನಗರದ ಮಂಜುನಾಥ ಕೆ.ಎನ್ ಅವರ ಪುತ್ರಿ
