ಮೂಡುಬಿದರೆ: ತೋಡಾರಿನ ಡಾ.ಎಂ.ವಿ.ಶೆಟ್ಟಿ ಇಂಜಿನಿಯರಿಂಗ್ ಕಾಳೇಜಿನ ವಾರ್ಷಿಕ ಸಮಾರಂಭ ಹಾಗೂ 4ನೇ ಬ್ಯಾಚಿನ 138 ವಿದ್ಯಾರ್ಥಿ ಗಳಿಗೆ ಪದವಿ ಪ್ರಧಾನ ಸಮಾರಂಭ ಕಾಲೇಜಿನ ಆವರಣದಲ್ಲಿ ನಡೆಯಿತು.
ಸುರತ್ಕಲ್ ಎನ್.ಐ.ಟಿ.ಕೆ.ಯ ಡೀನ್ ಡಾ. ಎ. ಕಂದ ಸಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿಯನ್ನು ಪ್ರದಾನ ಮಾಡಿದರು. ವಿದ್ಯಾರ್ಥಿ ಗಳಲ್ಲಿ ಬದ್ಧತೆಯಿರಬೇಕು. ಪದವಿಯನ್ನು ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯು ವೃತ್ತಿ ಪರತೆಯನ್ನು ಪಡೆಯುವುದು ಮಾತ್ರವಲ್ಲದೆ ಬದ್ಧತೆಗೆ ಅನುಗುಣವಾಗಿ ಜೀವಿಸಬೇಕು ಹಾಗೂ ಶಿಕ್ಷಣದ ಶ್ರೇಷ್ಠತೆಯನ್ನು ಅರಿತು ಕಠಿಣ ಪರಿಶ್ರಮದೊಂದಿಗೆ ಸಾಧನೆಯನ್ನು ಮಾಡಬೇಕು ಎಂದು ಹೇಳಿದರು.
ನೋವಿಗೊ ಸೊಲುಶನ್ ಫ್ರೈ.ಲಿ ಕಂಪೆನಿಯ ಎಂ.ಡಿ.ಪ್ರವೀಣ್ ಕಲ್ಬಾವಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪದವಿ ಶಿಕ್ಷಣ ಎನ್ನುವುದು ಜೀವನದ ಅಡಿಪಾಯಕ್ಕೆ ಪ್ರಮುಖವಾದ ಹಂತ. ಪದವಿ ಪಡೆದ ನಂತರ ಪ್ರಾಮಾಣಿಕತೆಯೊಂದಿಗೆ ಸಂದರ್ಶನಗಳನ್ನು ಎದುರಿಸಿದರೆ ತಮ್ಮ ವೃತ್ತಿ ಜೀವನದುದ್ದಕ್ಕೂ ಪ್ರಾಮಾಣಿಕತೆಯಿಂದ ಬಾಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಡಾ.ಎಂ.ವಿ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್ನ ಕಾರ್ಯದರ್ಶಿ ಡಾ. ರಾಮ್ ಗೋಪಾಲ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಟ್ರಸ್ಟಿ ಡಾ. ರಂಜಿತ್ ಶೆಟ್ಟಿ, ಹಿಮಾ ಉರ್ಮಿಳಾ ಶೆಟ್ಟಿ, ವಿವಿಧ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ಗಳಾದ ಪ್ರಸನ್ನ ಕುಮಾರ್, ಗಂಗಾಧರ್, ಪಾಂಡು ನಾಯಕ್, ಗುರುಪ್ರಸಾದ್, ಎಸೋಸಿಯೇಟ್ಸ್ ಪ್ರೊಫೆಸರ್ ಸುಬ್ರಾಯ ಬಾಳಿಗ ಪದವೀಧರರ ಹೆಸರುಗಳ ಪಟ್ಟಿಯನ್ನು ಓದಿದರು.
ಸಿಇಟಿ ಪರೀಕ್ಷೆಗೆ ಸಂಬಂಧಪಟ್ಟ ಪ್ರಶ್ನೆ ಪತ್ರಿಕೆಗಳ ಪುಸ್ತಕವನ್ನು ತಿಥಿಗಳು ಬಿಡುಗಡೆಗೊಳಿಸಿದರು. ಬ್ಲೇಸ್ಮೆಂಟ್ ಆಫೀಸರ್ ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಸಂದೀಪ್ ಜೆ.ನಾಯಕ್ ಕಾಲೇಜಿನ ವರದಿಯನ್ನು ಮಂಡಿಸಿದರು. ಡಾ.ಗೋವಿಂದ ನಾಯಕ್ ಪದವೀಧರರಿಗೆ ಪ್ರಮಾಣವಚನ ಬೋಧಿಸಿದರು. ಸಹಾಯಕ ಉಪಾನ್ಯಾಸಕಿಯರಾದ ಮಮತಾ ಮತ್ತು ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ಕುಮಾರ್ ವಂದಿಸಿದರು.
ನಾಲ್ಕನೇ ಬ್ಯಾಚ್ನ ಟಾಪರ್ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಉಪನ್ಯಾಸಕಿ ಸಷ್ಮಾ ವಿದ್ಯಾರ್ಥಿಗಳ ಹೆಸರುಗಳನ್ನು ಮಂಡಿಸಿದರು. ಎಲೆಕ್ರೋನಿಕ್ಸ್ ಹಾಗೂ ಕಮ್ಯುನಿಕೇಶನ್ ವಿಭಾಗದ 29, ಎಲೆಕ್ಟ್ರಿಕಲ್ & ಎಲೆಕ್ಟ್ರೋನಿಕ್ಸ್ ವಿಭಾಗದ 22, ಇನ್ಫಾರ್ಮೇಶನ್ ಆಫ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ 8, ಕಂಪ್ಯೂಟರ್ & ಇಂಜಿನಿಯರಿಂಗ್ ವಿಭಾಗದ 28 ಹಾಗೂ ಮೆಕ್ಯಾನಿಕಲ್ ವಿಭಾಗದ 51 ಹೀಗೆ ಒಟ್ಟು 138 ಪದವೀಧದರಿಗೆ ಪದವಿ ಪ್ರದಾನ ಮಾಡಲಾಯಿತು.
