ಪೊಳಲಿ ಸಾವಿರ ಸೀಮೆಯ  ಜನಸಾಗರದ ಮಧ್ಯೆ  “ಡಂಗುರ” ಮಾದರಿಯ ಘೋಷಣೆ

ಸುದ್ದಿ9ಕೈಕಂಬ: ಇತಿಹಾಶ ಪ್ರಸಿದ್ಧವಾದ ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವವು ಸಂಕ್ರಮಣದ ಮಾ.14ರಂದು ಶನಿವಾರ ರಾತ್ರಿ ದ್ವಜರೋಹಣಗೊಂಡಿತು.
ಸಂಕ್ರಮಣದಂದು ಸಂಜೆ ಉಳಿಪಾಡಿಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಟು ಬಂದ ನಂತರ ಪೊಳಲಿಯಲ್ಲಿ ಧ್ವಜಾರೋಹಣ ಆರಂಭವಾಗುತ್ತದೆ. ಪೊಳಲಿಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಒಂದು ತಿಂಗಳ ಅವಧಿಯ ಜಾತ್ರೆ ಇರುವುದು ನಿಜ. ಆದರೆ ಎಷ್ಟು ದಿನಗಳ ಜಾತ್ರೆ ಇದೆ ಎಂದು ಸಾಮಾನ್ಯವಾಗಿ ಯಾರಿಗೂ ತಿಳಿಯುವುದಿಲ್ಲ. ಇದೇ ಇಲ್ಲಿನ ವಿಶೇಷ.

9p

7p

8p

1

2p

3p

4p

5p

6p

23

28

29

30

32

33

34

36ಮಾ .15ರಂದು ಬೆಳಗ್ಗೆ ಕಂಚಿಲುಸೇವೆ ನಡೆದ ಬಳಿಕ ಒಟ್ಟು ಎಷ್ಟು ದಿನಗಳ ಕಾಲ ಜಾತ್ರೆ ಇರಬಹುದೆಂದು ಸಾವಿರ ಸೀಮೆಯ ಭಕ್ತಾಧಿಗಳು ಹಾಗೂ ಗುತ್ತಿನವರು, ಮೊಕ್ತೇಸರರು , ಅರ್ಚಕರು,  ದೇವಸ್ಥಾನದ ಮುಂಭಾಗದ ಗೋಪುರದಲ್ಲಿ ಜಾತಕಪಕ್ಷಿಯಂತೆ ಕಾಯುತ್ತಿರುತ್ತಾರೆ.
ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ನಟ್ಟೋಜಿ ವಂಶದ ಮನೆನತನದವರು ಪುತ್ತಿಗೆಯ ಸೋಮನಾಥ ದೇವಸ್ಥಾನದ ಜೋಯಿಸರಲ್ಲಿಗೆ ಮುನ್ನಾದಿನ ತೆರಳಿ ಅಲ್ಲಿ ದಿನ ನಿಗದಿ ಮಾಡಿ ಹಿಂಗಾರದ ಹಾಳೆಯೊಂದಿಗೆ ಪೊಳಲಿಗೆ ಆಗಮಿಸುತ್ತಾರೆ. ಕಂಚಿಲ್ (ಕಂಚುಬೆಳಕು) ಸೇವೆ ನಡೆದ ನಂತರ ನಟ್ಟೋಜರು ದುರ್ಗಾ ದೇವಿ ಗುಡಿಯ ಹಿಂಬದಿಯಲ್ಲಿ ಸೇರಿಗಾರ(ವಾಳಗ ಊದುವವ)ನ  ಹತ್ತಿರ ಹೋಗಿ ಹಿಂಗಾರದ ಹಾಳೆಯನ್ನು ಕೈಯಲ್ಲಿ ಕೊಟ್ಟು ಆತನ ಕಿವಿಯಲ್ಲಿ ಗೌಪ್ಯವಾಗಿದ್ದ ಆರಡದ ದಿನವನ್ನು ತಿಳಿಸುತ್ತಾರೆ.   ಸೇರಿಗಾರನು ಸೋಮಕಾಸುರ ಮತ್ತು ರಂಜಕಾಸುರನು  ಪ್ರಮಾಣ ಬಾವಿಗೆ ಒಂದು ಸುತ್ತು ಪ್ರದಕ್ಷಿಣೆ  ಬಂದು ಗೋಪುರದ ಮುಂಬಾಗದಲ್ಲಿ  ನಂದ್ಯ ಭಗವತಿ ಕ್ಷೇತ್ರದಿಂದ ಬಂದ ಭದ್ರಕಾಳಿಯ ಮೊಗ ಮೂರ್ತಿಯನ್ನು ಕದ್ರ್ ಮುಡಿಗೇರಿಸಿ ದ್ಯೆವ ದರ್ಶನ ಪಾತ್ರಿಯ ತಲೆಯ ಮೇಲೆ ಇಟ್ಟು    ನಂದ್ಯದ ಮನೆತನದ ಗುರಿಕಾರ ಮೂರುಸುತ್ತು ತಿರುಗಿಸಿದ ಬಳಕ ಸೋಮಕಾಸುರ ಮತ್ತು ರಂಜಕಾಸುರನ ದ್ಯೆವನರ್ತನದ ಪಂಬಬದ ಜನಾಂಗದವರು ಗೋಪುರಕ್ಕೆ ನರ್ತನ ಮಾಡುತ್ತಾ ಬಂದು ಅರಸುದ್ಯೆವದ ಆಯುಧವನ್ನು ತಿರುಗಿಸುತ್ತಾ ನರ್ತನ ಮಾಡುತ್ತಾರೆ. ಅಲ್ಲಿಗೆ ಸೇರಿಗಾರ ಹಿಂಗಾರ ಹಾಳೆಯನ್ನು ತಂದು ದ್ಯೆವ ನರ್ತನದಲ್ಲಿದ್ದವನ ಕೈಗೆ ಹಿಂಗಾರದ ಹಾಳೆಯನ್ನು ಕೊಟ್ಟು ಗುಟ್ಟಾಗಿ ಕಿವಿಯಲ್ಲಿ ಆರಡದ ದಿನವನ್ನು ಆತನ ಕಿವಿಯಲ್ಲಿ ಮೆಲ್ಲನೆ ಉಸುರುತ್ತಾರೆ.
ಈ ಘಟನೆ ನಡೆಯುತ್ತಿರುವಾಗ ಸಾವಿರಾರು ಮಂದಿ ಭಕ್ತರು ಗೋಪುರದ ಎದುರಲ್ಲಿಜಾತ್ರೆಯ ದಿನವನ್ನು ತಿಳಿದುಕೊಳ್ಳಲು ಕಾಯುತ್ತಿರುತ್ತಾರೆ. ಆಗ ಪಂಬದ(ದೈವಪಾತ್ರಿ)ನು ತುಳು ಭಾಷೆಯಲ್ಲಿ (ಇರ್ವತೊರ್ಂಭ ಪೋಪಿನಾನಿ ಐತಾರದಿನತಾನಿ ಆರಡ(29 ದಿನದಂದು ಆರಡ)  ಎಂದು ಜೋರಾಗಿ ಮೂರು ಸಲ ಕೂಗುವಾಗ ನೆರೆದಿದ್ದ ಭಕ್ತಾದಿಗಳ ಮುಖದಲ್ಲಿ ಉಲ್ಲಾಸದ ನಗುವಿನೊಂದಿಗೆ ತೆರಳುವ ದ್ರಶ್ಯ ಬಲು ಅಪರೂಪ ಎನಿಸಿತ್ತದೆ.  ಇದನ್ನು ತುಳುವಲ್ಲಿ ಕುದಿ ಲೆಪ್ಪುನಿ ಎನ್ನುತ್ತಾರೆ.

By suddi9

One thought on “ಇರ್ವತ್ತೊರ್ಂಭ ಪೋಪಿನಾನಿ ಐತಾರದಿನತಾನಿ ಆರಡ”
  1. Nice to see this website. Very informative. One thing I want to let you know that after the first day of announcing on the first day (Kudi Kareda Nanthara) Dhaivya Parthi will go to Ammunje to annouce the same thing at Ganapathi Temple in Amunje.

Leave a Reply

Your email address will not be published. Required fields are marked *