ಸುದ್ದಿ9 ಕೈಕಂಬ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವವು ವರ್ಷಂಪ್ರತಿಯಂತೆ ಮಾ.14ರಂದು ದ್ವಜರೋಹಣಗೊಂಡಿತು.
ಸಂಕ್ರಮಣದಂದು ಸಂಜೆ ಉಳಿಪಾಡಿಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಟ ನಂತರ ಪೊಳಲಿಯಲ್ಲಿ ಧ್ವಜಾರೋಹಣ ಆರಂಭವಾಗುತ್ತದೆ. ನಂದ್ಯ ಭಗವತಿ ಕ್ಷೇತ್ರದಿಂದ ಭಗವತಿ ಮುಗಮೂರ್ತಿ ಅರಸು ದ್ಯೆವದ ಆಯುಧದೊಂದಿಗೆ ಭಂಡಾರ ಆಗಮನ ದೇವಳದ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರರಾದ ಉಳಿಪಾಡಿಗುತ್ತು ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ದೇವಳದ ಪ್ರಧಾನ ಅರ್ಚಕರು ತಂತ್ರಿಗಳು ಹಾಗೂ ದೇವಳದ ಕಾರ್ಯನಿರ್ವಹಣಾಧಿಕಾರಿ ಹರಶ್ಚಂದ್ರ ಅವರನ್ನು ಬರಮಾಡಿಕೊಂಡರು.




















