ಸುದ್ದಿ9 ಕೈಕಂಬ: ಬಜಪೆ ಠಾಣಾ ವ್ಯಾಪ್ತಿಯ ಗುರುಪುರ ಬೆಳ್ಳಿಬೆಟ್ಟು ಎಂಬಲ್ಲಿ ಹಿಟಾಚಿ ಯಂತ್ರದ ಮೂಲಕ ಮಣ್ಣು ತೆಗೆಯುತ್ತಿದ್ದ ವೇಳೆ ಗುಡ್ಡದ ಮಣ್ಣು ಹಾಗೂ ಕಲ್ಲು ಕುಸಿದು ಹಿಟಾಚಿ ಯಂತ್ರದ ಮೇಲೆ ಬಿದ್ದ ಪರಿಣಾಮ ಹಿಟಾಚಿ ಚಾಲಕ ಗಂಭೀರವಾದ ಗಾಯಗೊಂಡ ಘಟನೆ ಮಾ. 12ರಂದು ಸಾಯಂಕಾಲ 5ರ ಸುಮಾರಿಗೆ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಬೆಳ್ತಂಗಡಿಯ ಅರುಣ್ ಕುಮಾರ್(30) ಎಂದು ಗುರುತಿಸಲಾಗಿದೆ. ಬಜ್ಪೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಕಾರ್ಯಾಚರಣೆ ನಡೆಸಿ ಗಾಯಾಳು ಡ್ರೈವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುವಿನ ಬೆನ್ನು ಹಾಗೂ ತಲೆಗೆ ಗಂಭಿರವಾದ ಏಟು ತಗುಲಿದ್ದು, ಹಿಟಾಚಿ ಯಂತ್ರದ ಮೇಲ್ಭಾಗದಿಂದಾಗಿ ಅರುಣ್ ಕುಮಾರ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
2ರಿಂದ6ರ ತನಕ: ಹಿಟಾಚಿ ಯಂತ್ರ ಮಣ್ಣಿನಿಂದ ಆವೃತ್ತವಾಗಿರುವುದು.

ಗುರುಪುರದ ಬೆಳ್ಳಿಬೆಟ್ಟು ಎಂಬಲ್ಲಿನ ಗುಡ್ಡದಿಂದ ಮಣ್ಣು ಅಗೆಯುತ್ತಿದ್ದ ಡ್ರೈವರ್ ಮೇಲೆ ಹಠಾತ್ ಆಗಿ ಕಲ್ಲು ಹಾಗೂ ಮಣ್ಣು ಕುಸಿದು ಬಿದ್ದಿದೆ. ಮಣ್ಣಿನಿಂದ ಹಿಟಾಚಿ ತುಂಬಿಹೋಗಿದ್ದು ಡ್ರೈವರ್ ಅದರೊಳಗಡೆ ಸಿಲುಕಿದ್ದ ಎಂದು ತಿಳಿದುಬಂದಿದೆ. ಹಿಟಾಚಿಯ ಮೇಲೆ ಮಣ್ಣು ಹಾಗೂ ಕಲ್ಲುಗಳು ಬಿದ್ದ ಪರಿಣಾಮ ಹಿಟಾಚಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಮಣ್ಣಿನಿಂದ ಆವೃತ್ತವಾಗಿತ್ತೆಂದು ತಿಳಿದುಬಂದಿದೆ.
ಮಣ್ಣುಗಳನ್ನು ಲಾರಿಯ ಮುಖಾಂತರ ತುಂಬಿಸಿ ಕಳಿಸಲಾಗುತಿತ್ತು. ಒಂದು ಲಾರಿಗೆ ಮಣ್ಣು ತುಂಬಿಸಿ ಮತ್ತೊಂದು ಲಾರಿ ಆಗಮಿಸುತ್ತಿದ್ದ ವೇಳೆ ಆ ಲಾರಿಯ ಚಾಲಕನಿಗೆ ಘಟನೆಯ ಅರಿವಾಗಿದೆ. ಲಾರಿ ಚಾಲಕ ತಕ್ಷಣ ಇತರ ಲಾರಿ ಚಾಲಕರಿಗೆ ಹಾಗೂ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿ ಹಿಟಾಚಿ ಚಾಲಕನನ್ನು ಹಿಟಾಚಿಯಿಂದ ತೆಗೆದು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಮಣ್ಣನ್ನು ಇನ್ನೊಂದು ಯಂತ್ರದ ಮೂಲಕ ತೆಗೆದು ಹಿಟಾಚಿ ಯಂತ್ರವನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಪೊಲೀಸರಿಗೆ ಸ್ಥಳೀಯರು ಸಹಕರಿಸಿದ್ದರು.
ಬಜ್ಪೆ ಇನ್ಸ್ಪೆಕ್ಟರ್ ನರಸಿಂಹ ಮೂರ್ತಿ ಹಾಗೂ ಸಿಬ್ಬಂದಿ ಕಾರ್ಯಚರಣೆ ಕೈಗೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ







