ನವದೆಹಲಿ: ಖ್ಯಾತ ಪತ್ರಕರ್ತ ಹಾಗೂ ಬರಹಗಾರ ಖುಷವಂತ್ ಸಿಂಗ್(99) ಹೃದಯಾಘಾತದಿಂದ ನಿಧನರಾಗಿದ್ದಾರೆ.  ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಅಗಲಿದ್ದಾರೆ.
k
1915ರ ಫೆ.15ರಂದು ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದ್ದ ಖುಷವಂತ್ ಸಿಂಗ್ “ಕಂಪನಿ ಆಫ್ ವುಮೆನ್”, “ಟ್ರೈನ್ ಟು ಪಾಕಿಸ್ತಾನ್”, “ಡೆಲ್ಲಿ” ಸೇರಿದಂತೆ ಅನೇಕ ಜನಪ್ರಿಯ ಪುಸ್ತಕಗಳನ್ನ ಬರೆದಿದ್ದಾರೆ.

“ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ”, “ದಿ ನ್ಯಾಷನಲ್ ಹೆರಾಲ್ಡ್” ಮತ್ತು “ಹಿಂದೂಸ್ತಾನ್ ಟೈಮ್ಸ್” ಪತ್ರಿಕೆಗಳಿಗೆ ಸಂಪಾದಕರೂ ಆಗಿ ಕೆಲಸ ಮಾಡಿದ್ದ ಖುಷವಂತ್ ಸಿಂಗ್ ಅವರ ಬರಹಳಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.

ಅಮೃತಸರದಲ್ಲಿ ಭಾರತೀಯ ಸೇನೆಯು ಸಿಕ್ಕರ ಮೇಲೆ ದಾಳಿ ನಡೆಸಿದ ಘಟನೆಯನ್ನ ವಿರೋಧಿಸಿ ಖುಷವಂತ್ ಸಿಂಗ್ 1984ರಲ್ಲಿ ತಮಗೆ ನೀಡಿದ್ದ ಪದ್ಮಭೂಷಣ ಪ್ರಶಸ್ತಿಯನ್ನ ಸರ್ಕಾರಕ್ಕೆ ಹಿಂದಿರುಗಿಸಿದ್ದರು.

ಖುಷವಂತ್ ಸಿಂಗ್ ತಮ್ಮ ಇಳಿವಯಸ್ಸಿನಲ್ಲೂ ಜೀವನದಲ್ಲಿ ಉತ್ಸಾಹದ ಬುಗ್ಗೆಯಂತಿದ್ದರು.

By suddi9

Leave a Reply

Your email address will not be published. Required fields are marked *