ಉಡುಪಿ: ಅನ್ಯಧರ್ಮೀಯರು ಹಿಂದೂಗಳನ್ನು ಮತಾಂತರಗೊಳಿಸಿದರೆ ಅದಕ್ಕೆ ಪ್ರತಿಯಾಗಿ ಮರುಮಂತಾಂತರ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತೇವೆ ಎಂದು ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಅವರು ವಿಶ್ವ ಹಿಂದು ಪರಿಷತ್‍ನ ಸುವರ್ಣಮಹೋತ್ಸವದ ಅಂಗವಾಗಿ ಉಡುಪಿ ಕುಂಜಿಬೆಟ್ಟು ಎಂಜಿಎಂ ಕ್ರೀಡಾಂಗಣದಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತಾಡುತ್ತಿದ್ದರು.

ಸಮಾಜದ ಅಶಾಂತಿಗೆ ಕಾರಣವಾಗುವ ಮತಾಂತರ, ಗೋಹತ್ಯೆ, ಭಯೋತ್ಪಾದನೆ, ಅಸ್ಪøಷ್ಯತೆ ಮುಂತಾದುವುಗಳು ಭಾರದತದಿಂದ ತೊಲಗಬೇಕೆ ಎಂದು ಸ್ವಾಮೀಜಿ ಕರೆ ನೀಡಿದರು.
ತಾಯಿ ಸರಿಯಿಲ್ಲದಿದ್ದರೆ ಮಗಳು ಲವ್ ಜಿಹಾದ್‍ಗೆ ಬಲಿ: ಪ್ರಶಾಂತ್ ಹರ್ ತಾಲ್ಕರ್
ತಂದೆ ತನ್ನ ಕರ್ತವ್ಯವವನ್ನು ಪಾಲಿಸದಿದ್ದರೆ ವೃದ್ಯಾಪ್ಯದಲ್ಲಿ ಆಶ್ರಮ ಸೇರಬೇಕಾಗುತ್ತದೆ. ಅದೇ ರೀತಿ ತಾಯಿ ತನ್ನ ತಾಯ್ತನವನ್ನು ಪಾಲಿಸದಿದ್ದರೆ ಮಗಳು ಲವ್ ಜಿಹಾದ್‍ಗೆ ಬಲಿಯಾಗುತ್ತಾಳೆ. ಒಂದು ಒಳ್ಳೆಯ ತಾಯಿ ಒಬ್ಬ ಉತ್ತಮ ಹಿಂದೂವನ್ನು ನಿರ್ಮಿಸುತ್ತಾಳೆ ಎಂದು ನಾಗ್ಪುರ ಜಿಲ್ಲೆ ವಿಶ್ವಹಿಂದೂ ಪರಿಷತ್ತಿನ ವಿಶ್ವವಿಭಾಗೀಯ ಸಂಚಾಲಕ ಪ್ರಶಾಂತ್ ಹರ್ ತಾಲ್ಕರ್ ಹೇಳಿದ್ದಾರೆ.
ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಸ್ವಾಮೀಜಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಬಾಳೆಕುದ್ರು ಮಠದ ನರಸಿಂಹಾಶ್ರಮ ಸ್ವಾಮೀಜಿ, ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ, ಮೋಹನ್ ಆಳ್ವಾ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಸುಪ್ರಸಾದ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
