ಕುಂದಾಪುರ: ನಿಶ್ಚಿತಾರ್ಥಗೊಂಡಿದ್ದ ಯುವತಿಯೋರ್ವಳು ಭಾವೀ ಗಂಡನ ಸಂಶಯಪಿಶಾಚಿಗೆ ಬಲಿಯಾಗಿ ಮನೆ ಸಮೀಪದ ಪಾಳಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರು ಸಮೀಪದ ಪಡುವರಿ ಗ್ರಾಮದಲ್ಲಿ ನಿನ್ನೆ ನಡೆದಿದೆ. ಮಡಿವಾಳ ಹಿತ್ತಲಿನ ನಿವಾಸಿಗಳಾದ ಈಶ್ವರ ದೇವಾಡಿಗ ದಂಪತಿಗಳ ಪುತ್ರಿ ಅನಸೂಯಾ (26) ಮೃತ ದುರ್ದೈವಿ.

Byndoor_Lady_Death (1)

Byndoor_Lady_Death
ಸುಮಾರು ಒಂದುವರೆ ತಿಂಗಳುಗಳ ಹಿಂದೆ ಈಕೆಯ ವಿವಾಹ ನಿಶ್ಚಿತಾರ್ಥವು ನಾಗೂರು ಮೂಲದ ಯುವಕನೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆದಿತ್ತೆನ್ನಲಾಗಿದೆ ತದ ನಂತರ ಮೊಬೈಲ್ ಮೂಲಕ ಭಾವೀ ಸತಿಪತಿಗಳು ತೀರಾ ಹತ್ತಿರವಾಗಿದ್ದರೂ, ಕ್ರಮೇಣ ಅವಳ ನಡತೆಯ ಬಗ್ಗೆ ಅಲ್ಲಸಲ್ಲದ ಗುಮಾನಿ ವ್ಯಕ್ತ ಪಡಿಸಿ ಮೊಬ್ಯಲ್ ನಲ್ಲೇ ಅಸಭ್ಯವಾಗಿ ಬೈಯುತ್ತಿದ್ದ ನಲ್ಲದೆ ಆಗಾಗ್ಗೆ ವಧುವಿನ ಮನೆಗೂ ಸಹಾ ಬಂದು ಹೋಗುತಿದ್ದ ಹುಡುಗ ಅನಸೂಯಾ ಆತ್ನಹತ್ಯೆಗೈಯುವ ಆಕೆಯ ಮನೆಗೆ ಆಗಮಿಸಿದ್ದು ಆ ಸಂದರ್ಭದಲ್ಲಿ ಇಬ್ಬರ ನಡುವೆ ಭಾರೀ ಮಾತಿನ ಸಮರ ಜರಗಿತ್ತು ಎಂದು ನೆರೆ ಹೊರೆಯ ನಿವಾಸಿಗಳು ಪಿಸುಗುಡುತ್ತಿದ್ದಾರೆ. ತದ ನಂತರವೇ ಅನಸೂಯಾ ಬದುಕನ್ನೇ ಅಂತ್ಯಗೊಳಿಸುವ ಕಟು ನಿರ್ದಾರಕ್ಕೆ ಬಂದಿರ ಬಹುದೆಂದು ಗುಮನಿ ಪಡಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

By suddi9

Leave a Reply

Your email address will not be published. Required fields are marked *