ಸುದ್ದಿ9ಕೈಕಂಬ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ವರ್ಷಾವದಿ ಜಾತ್ರಾ ಮಹೋತ್ಸವವು ಮಾ. 4ರಂದು ಬುಧವಾರ ದ್ವಜಾರೋಹಣದೊಂದಿಗೆ ಪ್ರಾರಂಭಗೊಳ್ಳಲಿದೆ.
ಮಾ.4ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ದೇವತಾ ಪ್ರಾರ್ಥನೆ. ನವಕಕಲಶ,-ಪ್ರಧಾನಹೋಮ, ಮಧ್ಯಾಹ್ನ ಮಹಾಪೂಜೆ-ಅನ್ನಸಂತರ್ಪಣೆ ಸಾಯಂಕಾಲ 4ಕ್ಕೆ ಕೋಳಿಕುಂಟ, ರಾತ್ರಿ ಗಂಟೆ 7ಕ್ಕೆ ಭಂಡಾರದ ಮನೆಯಿಂದ ಭಂಡಾರ ಬರುವುದು. ರಾತ್ರಿ ಗಂಟೆ 9ಕ್ಕೆ ದ್ವಜಾರೋಹಣ ಉತ್ಸವ ಬಲಿ,ಕಂಚಿಲಸೇವೆ.
ಮಾ. 5ರಂದು ಗುರುವಾರ ಸಾಯಂಕಾಲ 5ಗಂಟೆಗೆ ಪ್ರಥಮ ಚೆಂಡು ರಾತ್ರಿ 7ಗಂಟೆಗೆ ಪಣ ಪಣ ತುಡರ ಉತ್ಸವ ಬಲಿ,ಚಂದ್ರ ಮಂಡಲ.
ಮಾ. 6ರಂದು ಶುಕ್ರವಾರ ನಡುಬಲಿ ಉತ್ಸವ ಸಾಯಂಕಾಲ 5ಗಂಟೆಗೆ ನಡು ಚೆಂಡು, ಉತ್ಸವಬಲಿ, ಚಂದ್ರಮಂಡಲ, ಪಲ್ಲಕಿ ಉತ್ಸವ.
ಮಾ. 7ರಂದು ಶನಿವಾರ ರಥೋತ್ಸವ ಸಾಯಂಕಾಲ 5 ಗಂಟೆಯಿಂದ ಕಡೆ ಚೆಂಡು ರಥದಲ್ಲಿ ಹೂವಿನ ಪೂಜೆ, ರಥೋತ್ಸವ ಬಲಿ.
ಮಾ.8ರಂದು ಭಾನುವಾರ ಪ್ರಾತಃಕಾಲ 7ಗಂಟೆಗೆ ಕವಾಟೋದ್ಘಾಟನೆ, ತುಲಾಭಾರ ಸೇವೆ ,ಚೂರ್ಣೋತ್ಸವ -ಚಂದ್ರಮಂಡಲ. ರಾತ್ರಿ ಗಂಟೆ 7ರಿಂದ ಯಾತ್ರಾ ಹೋಮ, ದೇವರ ಓಕುಳಿ ಸ್ನಾನ, ಸವಾರಿಯಲ್ಲಿ ಕಟ್ಟೆಪೂಜೆ ಧ್ವಜಾವರೋಹಣ, ಮಾಡ್ಲಾಯ ದ್ಯೆವದ ನೇಮೋತ್ಸವ ಜರಗಲಿದೆ ಎಂದು ದೇವಳದ ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ .

By suddi9

Leave a Reply

Your email address will not be published. Required fields are marked *