ಬಂಟ್ವಾಳ : ಇಲ್ಲಿನ ಪೇಟೆಯಿಂದ ಬೆರ್ಕಳವನ್ನು ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ಕಷ್ಟವಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಜಲ್ಲಿ ಕಲ್ಲುಗಳಿಂದ ತುಂಬಿದ ರಸ್ತೆ ನಡೆದಾಡಲೂ ಅಸಾಂಭವವಾಗಿ ಜನ ಹಾಗೂ ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದು ಊರುಗಳ ಸಂಪರ್ಕ ಶೋಚನೀಯವಾಗಿದೆ.
ಕಳೆದ ಹಲವಾರು ವರ್ಷಗಳಿಂದ ದುರಸ್ತಿ ಕಾಣದ ಈ ರಸ್ತೆ ಸಾರ್ವಜನಿಕರ ಪ್ರತಿ`ಟನೆಯಿಂದ ಮಳೆಗಾಲದ ಮುಂಚೆ ದುರಸ್ತಿ ಕಾರ್ಯ ಆರಂಭಿಸಿದ್ದು ಅಸಮರ್ಪಕ ಯೋಜನೆಯಿಂದ ಇದ್ದ ರಸ್ತೆಯೂ ಹಾಳಾಗಿ ಇಂತಹ ಪರಿಸ್ಥಿತಿ ಉಂಟಾಗಿದ್ದು ಈ ರಸ್ತೆಯಲ್ಲಿ ಸಾಗುವವರು ಯಮಯಾತನೆ ಅನು`ವಿಸುತ್ತಿದ್ದಾರೆ.
ಜಿಲ್ಲಾ ಪಂಚಾಯತ್ಗೆ ಸಂಬಂಸಿದ ಈ ರಸ್ತೆ ಕೆಲವೆಡೆ ಬಂಟ್ವಾಳ ತಾಲೂಕಿಗೆ ಹಾಗೂ ಕೆಲವೆಡೆ ಬೆಳ್ತಂಗಡಿ ತಾಲೂಕಿಗೆ ಸೇರಿದೆ.ಬೆಳ್ತಂಗಡಿ ತಾಲೂಕಿನ ಅಳದಂಗಡಿ ಜಿ.ಪಂ.ಕ್ಷೇತ್ರ ಹಾಗೂ ಬಂಟ್ವಾಳ ತಾಲೂಕಿನ ಸರಪಾಡಿ ಜಿ.ಪಂ.ಕ್ಷೇತ್ರಗಳನ್ನು ಒಳಗೊಂಡಿದೆ. ಈ ರಸ್ತೆ ಬೆರ್ಕಳ,ನರಸಿಕುಮೇರು,ಮಾಡಪಲ್ಕೆಯಿಂದ ಪಾಂಡವರಕಲ್ಲಿಗೆ ಸಂಪರ್ಕ ಹಾಗೂ ಮಾಡಪಲ್ಕೆಯಿಂದ ಕಟ್ಟದಪಡ್ಪು ,ಕಕ್ಯಪದವು ಮಾರ್ಗವಾಗಿ ನೇರ ಉಪ್ಪಿನಂಗಡಿಯನ್ನು ಸಂಪರ್ಕಿಸುತ್ತದೆ. ಈ ಭಾಗದ ಜನರು ವಾಣಿಜ್ಯ ವ್ಯವಹಾರಗಳಿಗೆ, ಆಸ್ಪತ್ರೆಗೆ ಹಾಗೂ ವಿದ್ಯಾರ್ಥಿ ಗಳು ಪುಂಜಾಲಕಟ್ಟೆಗೆ ಬರಬೇಕಾದರೆ ಈ ರಸ್ತೆಯನ್ನೇ ಅವಲಂಬಿಸುತ್ತಿದ್ದಾರೆ. ಇದೀಗ ಕೆಸರುಮಯವಾದ, ಸಂಚಾರಕ್ಕೆ ಅಯೋಗ್ಯವಾದ ರಸ್ತೆಯಿಂದಾಗಿ ಬಹಳ ಸುತ್ತು ಬಳಸಿ ಪಾಂಡವರಕಲ್ಲು – ಮಡಂತ್ಯಾರು ಮಾರ್ಗವಾಗಿ ಪ್ರಯಾಣಿಸುತ್ತಿದ್ದಾರೆ. ದುಬಾರಿ ಹಣ ತೆತ್ತು ಇಷ್ಟು ದೂರ ಪ್ರಯಾಣಿಸಲು ಅನಾನುಕೂಲವಾದವರು ಎದ್ದುಬಿದ್ದು ಕಾಲು ಕೆಸರು ಮಾಡಿಕೊಂಡು ನಡೆಯಲು ಗಂಟೆಗಟ್ಟಲೆ ವ್ಯಯಿಸುತ್ತಾರೆ. ಅನಾರೋಗ್ಯದಿಂದ ಬಳಲುವವರಿಗಂತೂ ದೇವರೇ ಗತಿ. ಹಾಲು ಸರಬರಾಜು ಕೇಂದ್ರಕ್ಕೆ ಹಾಲು ಕೊಂಡೊಯ್ಯುವ ಅಟೋರಿಕ್ಷಾದ ಸಂಕಷ್ಟ ಹೇಳತೀರದು. ಸಾರ್ವಜನಿಕರು ಈ ಪರಿಸ್ಥಿತಿಯಿಂದ ಯಾವಾಗ ಮುಕ್ತಿ ದೊರಕುವುದೋ ಎಂದು ಪರಿತಪಿಸುತ್ತಿದ್ದಾರೆ.

ಇಲ್ಲಿನ ಪರಿಸರದಲ್ಲಿ ಕಾಯರ್ಾಚರಿಸುತ್ತಿರುವ ಕಲ್ಲಿನ ಕೋರೆಗಳ ಘನಗಾತ್ರದ ಟಿಪ್ಪರ್ಗಳಿಂದಾಗಿ ರಸ್ತೆ ಹೊಂಡ ಉಂಟಾಗಿತ್ತು ಎಂದು ಸಾರ್ವಜನಿಕರು ಆರೋಪಿಸಿದ್ದರು. ಜನರ ಪ್ರತಿ`ಟನೆಗೆ ಸ್ಪಂದಿಸಿದ ಬೆಳ್ತಂಗಡಿ ಹಾಗೂ ಬಂಟ್ವಾಳ ಶಾಸಕರು ರಸ್ತೆ ಅಭಿವೃದ್ಧಿಯ `ರವಸೆ ನೀಡಿದ್ದರು. ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ ಅವರು ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಿಕೊಡುವ `ರವಸೆಯಂತೆ ರಸ್ತೆ ಕಾಮಗಾರಿ ಆರಂ`ಗೊಂಡಿತ್ತು. ಆದರೆ ಬಳಿಕ ಅರ್`ದಲ್ಲಿಯೇ ನಿಂತಿತ್ತು . ಪ್ರಸ್ತುತ ರಸ್ತೆ ಅಭಿವೃದ್ಧಿಗೆ ದೊಡ್ಡ ಮೊತ್ತದ ಅನುದಾನ ಲಭಿಸಿರುವುದಾಗಿ ಕೇಳಿಬರುತ್ತಿದ್ದರೂ ಕಾಮಗಾರಿ ಆರಂ`ಗೊಂಡಿಲ್ಲ . ಈ ಹಿಂದೆ ಪ್ರತಿ`ಟನೆಗಳ ಸಂದರ್`ದಲ್ಲಿ ನೀಡಿದ `ರವಸೆ ಈಡೇರಿಲ್ಲ . ಇದರಿಂದ ಹತಾಶೆ ಜನತೆ ಭ್ರಮನಿರಶನಗೊಂಡಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯತ್ ರಸ್ತೆ ಅಭಿವೃದ್ಧಿಗೆ ಸಂಬಂಸಿದ ಇಲಾಖಾಕಾರಿಗಳಲ್ಲಿ , ಜನಪ್ರತಿನಿಗಳಲ್ಲಿ ಹಲವಾರು ಬಾರಿ ಮನವಿ ಮಾಡಿದ್ದರೂ ದುರಸ್ತಿಯಾಗದ ಕಾರಣ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ ಹಿಂಪಡೆದಿದ್ದೂ ಆಗಿತ್ತು.
ಇದೀಗ ರಸ್ತೆ ದುರವಸ್ಥೆಯಿಂದ ಅಕ್ರೋಶಿತ ಸ್ಥಳೀಯ ತುಳುನಾಡ ರಕ್ಷಣಾ ವೇದಿಕೆಯ ಘಟಕದ ವತಿಯಿಂದ ಅಟೊ ರಿಕ್ಷಾ ಚಾಲಕ-ಮಾಲಕರ ಸಂಘ ಹಾಗೂ ಸಾರ್ವಜನಿಕರು ಮತ್ತು ವಿವಿ` ಸಂಘಟನೆಗಳ ಸಹಕಾರದಲ್ಲಿ ಪ್ರತಿ`ಟನೆ ಮಾ.7ರಂದು ಬೃಹತ್ ಪ್ರತಿ`ಟನೆ ನಡೆಯಲಿದೆ ಎಂದು ತಿಳಿದುಬಂದಿದೆ.
