ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ವತಿಯಿಂದ 31ನೇ ವಾರ್ಷಿಕೋತ್ಸವ ಪ್ರಯುಕ್ತ ಮಾ.8ರಂದು ನಡೆಯಲಿರುವ 7ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಅಂಗವಾಗಿ ವಧು-ವರರ ನಿಶ್ಚಿತಾರ್ಥ ಕಾರ್ಯಕ್ರಮ ರವಿವಾರ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಸಭಾಂಗಣದಲ್ಲಿ ಜರಗಿತು.
ಕಜೆಕಾರು ಗ್ರಾ.ಪಂ.ಮಾಜಿ ಅಧ್ಯಕ್ಷ ಡೀಕಯ ಬಂಗೇರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಾಮೂಹಿಕ ವಿವಾಹದಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಸ್ವಸ್ತಿಕ್ ಫ್ರೆಂಡ್ಸ್ ಅಭಿನಂದಾರ್ಹರು ಎಂದು ಹೇಳಿದರು.ಪಿಲಾತಬೆಟ್ಟು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಧರ್ಮಪಾಲ ಪೂಜಾರಿ,ಬಿಜೆಪಿ ಜಿಲ್ಲಾ ರೈತ ಮೋರ್ಛಾ ಅಧ್ಯಕ್ಷ ಸೀತಾರಾಮ ಹೆಗ್ಡೆ ,ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಸಂತೋಷ್ ಮೂರ್ಜೆ ,ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎ.ಮಂಜಪ್ಪ ಮೂಲ್ಯ,ಶಿಕ್ಷಕ ಉದಯ ಕುಮಾರ್ ಶೆಟ್ಟಿ ,ಉದ್ಯಮಿ ಉಮೇಶ್ ಪೂಜಾರಿ ಅತಿಥಿಗಳಾಗಿ ಭಾಗವಹಿಸಿದ್ದರು.
ಕ್ಯಾಪ್ಷನ್:ಸ್ವಸಿಕ್ ಫ್ರೆಂಡ್ಸ್ ಕ್ಲಬ್ನ ಸಾಮೂಹಿಕ ವಿವಾಹದ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು.


ವರನ ಕಡೆಯಿಂದ ಮೊಗೆರೋಡಿ ಸಂಜೀವ ಶೆಟ್ಟಿ ಹಾಗೂ ವಧು ಕಡೆಯಿಂದ ಗಿರೀಶ್ ಪೂಜಾರಿ ಹೆಗ್ಡೆಬೆಟ್ಟು ಅವರು ಗುರಿಕಾರರಾಗಿ ಭಾಗವಹಿಸಿ ನಿಶ್ಚಯ ತಾಂಬೂಲ ನೆರವೇರಿಸಿದರು.ಎಂಕ್ಲೆನ ಪೊಣ್ಣನ್ ನಿಕ್ಲೆನ ಆಣಗ್ ಕೊರಿಯೆರೆ ಎಂಕ್ಲ್ ತಪ್ಪುಜ… ಎಂಕ್ಲೆನ ಆಣಗ್ ನಿಕ್ಲೆನ ಪೊಣ್ಣನ್ ಕನಯೆರೆ ಎಂಕ್ಲ್ ತಪ್ಪುಜ…(ನಮ್ಮ ಹುಡುಗಿಯನ್ನು ನಿಮ್ಮ ಹುಡುಗನಿಗೆ ಕೊಡಲು ತಪ್ಪುವುದಿಲ್ಲ…ನಮ್ಮ ಹುಡುಗನಿಗೆ ನಿಮ್ಮ ಹುಡುಗಿಯನ್ನು ತರಲು ತಪ್ಪುವುದಿಲ್ಲ) ಎಂದು ನುಡಿದು ಗುರಿಕಾರರು ತುಳುನಾಡಿನ ಸಂಪ್ರದಾಯ ಪ್ರಕಾರ ವೀಳ್ಯೆದೆಲೆ , ಅಡಿಕೆ, ಮಲ್ಲಿಗೆ ಹೂವು ಇರಿಸಿದ ಹರಿವಾಣವನ್ನು ಹಿಡಿದು ಪರಸ್ಪರ ಬದಲಾಯಿಸಿಕೊಳ್ಳುವುದರೊಂದಿಗೆ ವಧು-ವರರ ವಿವಾಹಕ್ಕೆ ನಿಶ್ಚಿತಾರ್ಥವೆಂಬ ಅಧಿಕೃತ ಮುದ್ರೆ ಬಿತ್ತು. 10 ಜೋಡಿ ವಧು-ವರರ ಕುಟುಂಬಸ್ಥರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ವಧು-ವರರಿಗೆ ವಿವಾಹ ಮಂಗಳ ವಸ್ತ್ರ ವಿತರಿಸಲಾಯಿತು.ವಧು-ವರರು ಉಂಗುರ ವಿನಿಮಯ ಮಾಡಿಕೊಂಡರು. ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ,ಕಾರ್ಯದಶರ್ಿ ಜಯರಾಜ್ ಅತ್ತಾಜೆ ,ಕೋಶಾಧಿಕಾರಿ ರಾಜೇಶ್ ಪುಳಿಮಜಲು ಹಾಗೂ ವಿವಿಧ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪ್ರಭಾಕರ ಪಿ.ಎಂ ಸ್ವಾಗತಿಸಿದರು. ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಸ್ತಾವಿಸಿದರು.ದೇವಪ್ಪ ಶೆಟ್ಟಿ ಕುಂಟಜಾಲು ಹಾಗೂ ಭರತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.
