ಬೆಳ್ತಂಗಡಿ: ಮಹಾರಾಷ್ಟ್ರ ನವಿ ಮುಂಬೈ ನಿವಾಸಿ, ಉದ್ಯಮಿ ರಾಮ್‍ದಾಸ್ ಪೂಜಾರಿ ಮಂಗಳೂರಿನ ಬೋಳಾರದಲ್ಲಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಸಿಗಬೇಕಾಗಿದೆ.
ಏನಿದು ಪ್ರಕರಣ?
ಕೆಲವು ತಿಂಗಳ ಹಿಂದೆ ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆಂದು ಮುಂಬೈ ನಿವಾಸಿ ರಾಮ್‍ದಾಸ್ ಪೂಜರಿ ಆಗಮಿಸಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ ಕೆಲವು ತಿಂಗಳ ಬಳಿಕ ಉಜಿರೆಯ ನೇತ್ರಾವತಿ ಸೇತುವೆಯ ಸಮೀಪ ಅಪರಿಚಿತ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿತ್ತು. ಈ ಮೃತದೇಹದ ವ್ಯಕ್ತಿ ರಾಮ್‍ದಾಸ್ ಪೂಜಾರಿಯದ್ದೇ ಎಂದು ಪೊಲೀಸರು ಶಂಕಿಸಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದರು.

ರಾಂದಾಸ್ ಪೂಜಾರಿ
ರಾಂದಾಸ್ ಪೂಜಾರಿ

 

ramdas111ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎಂಬ ನಿರ್ಣಯಕ್ಕೆ ಬಂದ ಪೊಲೀಸರು ಮಲ್ಲೇಶ ಎಂಬಾತನನ್ನು ಬಂಧಿಸಿದ್ದರು. ಮಲ್ಲೇಶ್ ಮೊಬೈಲ್‍ನಲ್ಲಿ ರಾಮ್‍ದಾಸ್ ಫೊಟೋ ಇರುವುದನ್ನು ಕಂಡು ಪೊಲೀಸರು ಆತನೇ ಕೊಲೆಗಾರ ಎಂದು ಭಾವಿಸಿ ಬಂಧಿಸಿದ್ದರು. ಆತನೇ ಮೃತದೇಹವನ್ನು ತೋರಿಸಿಕೊಟ್ಟಿದ್ದರಿಂದ ಈ ಸಂಶಯಕ್ಕೆ ಬರಲಾಗಿತ್ತು ಎನ್ನಲಾಗಿದೆ.
ಆದರೆ ನಂತರದ ಬೆಳವಣಿಗೆಯಲ್ಲಿ ರಾಮ್‍ದಾಸ್ ಮನೆಯವರು ಇದು ರಾಮ್‍ದಾಸ್ ಅವರ ಶವವಲ್ಲ, ಅವರು ಸತ್ತಿಲ್ಲ, ಮಾನಸಿಕ ಅಸ್ವಸ್ಥರಾಗಿರುವ ಅವರು ಎಲ್ಲೋ ಜೀವಂತವಾಗಿದ್ದಾರೆ ಎಂದು ಶವಸಂಸ್ಕಾರಕ್ಕೆ ಹಿಂದೆ ಸರಿದಿದ್ದರು. ಇದಕ್ಕಾಗಿ ಪೊಲೀಸರು ಮೃತದೇಹದ ಡಿಎನ್‍ಎ ಪರೀಕ್ಷೆಗೂ ಮುಂದಾಗಿದ್ದರು.
ಸ್ವಲ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ರಾಮ್‍ದಾಸ್ ಅವರನ್ನು ಪತ್ತೆ ಮಾಡುವಂತೆ ಅವರ ಮನೆಯವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಇದರಂತೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ರಾಮ್‍ದಾಸ್ ಮನೆಯವರೂ ರಾಮ್‍ದಾಸ್ ಪತ್ತೆ ಮಾಡಿ ಕೊಟ್ಟರೆ ಅವರುಗೆ ಸೂಕ್ತ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು. ಈ ಬಗ್ಗೆ ಪತ್ರಿಕೆಗಳು ವರದಿಯನ್ನೂ ಮಾಡಿದ್ದವು.
ಪತ್ರಿಕೆಯಲ್ಲಿ ಬಂದಿರುವ ವ್ಯಕ್ತಿಯ ಚಹರೆಯನ್ನು ಕಂಡ ಬೋಳಾರದ ಸಾರ್ವಜನಿರು ಅವರನ್ನು ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಆರೋಪಿ ಮಲ್ಲೇಶ ತೋರಿಸಿದ್ದ ಮೃತದೇಹ ಯಾರದ್ದು?

ಮಲ್ಲೇಶ
ಮಲ್ಲೇಶ

ಅಷ್ಟಕ್ಕೂ ಇಲ್ಲಿ ಸಂಶಯಕ್ಕೆ ಕಾರಣವಾಗಿರುವ ಪ್ರಶ್ನೆ ಏನೆಂದರೆ ಆರೋಪಿ  ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಪಶ್ಚಿಮ ಕಾಲನಿಯ ಮಲ್ಲೇಶ(19) ತೋರಿಸಿದ್ದ ಮೃತದೇಹ ಯಾರದ್ದು ಎಂಬುದು. ಇನ್ನೊಂದು ಪ್ರಶ್ನೆ ಏನೆಂದರೆ ಮಲ್ಲೇಶ ನಿಜವಾಗಿಯೂ ಆರೋಪಿಯೇ ಅಥವಾ ಪೊಲೀಸರು ಸುಮ್ನೆ ಪ್ರಕರಣಕ್ಕೆ ಫಿಕ್ಸ್ ಮಾಡಿದ್ದಾರೆಯೇ ಎಂಬುದು. ಆತನನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭ ಧರ್ಮಸ್ಥಳ ಗ್ರಾಮದ ದೊಂಡೋಲೆಯಲ್ಲಿ ಕೊಲೆ ನಡೆಸಿರುವುದಾಗಿ ಬಾಯಿ ಬಿಟ್ಟಿದ್ದ ಎಂದು ಸ್ವತಃ ಪೊಲೀಸರೇ ತಿಳಿಸಿದ್ದರು.

ಸಂಶಯಕ್ಕೆ ಕಾರಣವಾದ ಶವ
ಸಂಶಯಕ್ಕೆ ಕಾರಣವಾದ ಶವ

ಅಪರಿಚತ ಶವ ಪತ್ತೆಯಾದ ಬಳಿಕ ಅದೇ ಜಾಗದಲ್ಲಿ ಮತ್ತೊಂದು ಶವ ಕೂಡಾ ಪತ್ತೆಯಾಗಿದೆ. ಈ ಎರಡು ಶವಗಳು ಯಾರದ್ದು ಎಂಬ ಪ್ರಶ್ನೆ ಸುಳಿದಾಡಲು ಆರಂಭಿಸಿದೆ.
ಒಟ್ಟಿನಲ್ಲಿ ಈ ಪ್ರಕರಣ ಗೋಜಲು ಗೋಜಲಾಗಿ ಪರಿಣಮಿಸಿದ್ದು ತನಿಖೆಯಿಂದಷ್ಟೇ ಬಯಲಾಗಬೇಕಾಗಿದೆ.

By suddi9

Leave a Reply

Your email address will not be published. Required fields are marked *