ಮೂಡುಬಿದರೆ : ಕಳೆದ ನಾಲ್ಕು ವರ್ಷಗಳಿಂದ ಮೂಡುಬಿದರೆಯಲ್ಲಿ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ವಹಿಸಿದ್ದ ಸ್ವ-ಸಹಾಯ ಗುಂಪುಗಳನ್ನು ರದ್ದುಗೊಳಿಸಿ ಟೆಂಡರ್ ಮೂಲಕ ಗುತ್ತಿಗೆದಾದರ ಪಾಲಿಗೆ ನೀಡುವುದೆಂದು ಮೂಡುಬಿದರೆ ಪುರಸಭೆಯು ನಿರ್ಣಯ ಮಾಡಿದೆ.
ಪುರಸಭಾಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪುರಸಭಾ ಸಭಾಭವನದಲ್ಲಿ ಶುಕ್ರವಾರ ನಡೆದ ಮಾಸಿಕ ಸಭೆಯಲ್ಲಿ ಈ ಮೇಲಿನ ನಿರ್ಣಯವನ್ನು ಕೈಗೊಂಡಿದೆ. ಘನ ತ್ಯಾಜ್ಯ ನಿರ್ವಹಣೆಗಾಗಿ ಉಪಯೋಗಿಸಲು ಪುರಸಭೆಯು 2 ಪಿಕ್ಅಪ್, 1 ಮ್ಯಾಕ್ಸಿಮೋ ಪಿಕ್ ಅಫ್ ವಾಹನಗಳನ್ನು ಸ್ವ-ಸಹಾಯ ಗುಂಪುಗಳ ಹೆಸರಿನಲ್ಲಿ ಬ್ಯಾಂಕಿನಿಂದ ಸಾಲ ಪಡೆದು ಖರೀದಿಸಿದ್ದು ಅದರ ನಿರ್ವಹಣೆಯ ಜವಾಬ್ದಾರಿಯನ್ನು ಗುಂಪಿನ ಸದಸ್ಯರೇ ವಹಿಸಿದ್ದರು. ಆದರೆ ಕೆಲವು ಸಮಯಗಳಿಂದ ವಾಹನಗಳ ಕಂತು ಬಾಕಿಯಾಗಿದ್ದು ಈ ಬಗ್ಗೆ ಬ್ಯಾಂಕಿನವರು ನೋಟಿಸು ಕಳುಹಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲದಿರುವುದರಿಂದ ವಾಹನವನ್ನು ವಶಕ್ಕೆ ಪಡೆಯುವ ಬಗ್ಗೆ ನೋಟೀಸನ್ನು ನೀಡಿದ್ದರು ಆದರೆ ಇದ್ಯಾವುದಕ್ಕೂ ಗುಂಪಿನ ಸದಸ್ಯರು ಪ್ರತಿಕ್ರಿಯೆ ನೀಡಿಲ್ಲ ಅಲ್ಲದೆ ಪುರಸಭೆಗೂ ಜಮಾ ಖಚರ್ು ವೆಚ್ಚದ ದಾಖಲೆಯನ್ನು ನೀಡಿರಲಿಲ್ಲ ಹಾಗೂ ಪೆಟ್ರೋಲ್ ಬಂಕ್ನಲ್ಲಿ ಹಣ ಬಾಕಿ, ವಾಹನಗಳ ದುರಸ್ಥಿಯಾಗಿಲ್ಲ ಅಲ್ಲದೆ ವಾಹನಗಳ ವಿಮೆಯನ್ನು ಬಾಕಿ ಇಡಲಾಗಿತ್ತು. ಈ ಕಾರಣಗಳಿಗಾಗಿ, ಜೊತೆಗೆ ಘನತ್ಯಾಜ್ಯ ನಿರ್ವಹಣೆ ಸಮರ್ಪಕ ರೀತಿಯಲ್ಲಿ ಮಾಡುವ ದೃಷ್ಠಿಯಿಂದ ಘನತ್ಯಾಜ್ಯ ನಿರ್ವಹಣೆ ಗುತ್ತಿಗೆದಾರಿಗೆ ವಹಿಸಲಾಗುವುದೆಂದು ಸಭೆ ನಿರ್ಣಯಿಸಿದೆ.

ಮೂಡುಬಿದರೆ ಪುರಸಭಾ ಮಾಸಿಕ ಸಭೆಯಲ್ಲಿ ನಿರ್ಣಯ
mbd_feb27_3
ಆರ್ಟಿಇ ಗೊಂದಲ:
ಕಂದಾಯ ವಾಡರ್್ಗಳ ಪಟ್ಟಿಗೂ ಪರಿಷ್ಕೃತ ವಾಡರ್್ಗಳ ಪಟ್ಟಿಗೂ ವ್ಯತ್ಯಾಸವಿರುವ ಕಾರಣದಿಂದಾಗಿ ಶಾಲೆಗಳಲ್ಲಿ ಪ್ರವೇಶಾತಿ ಅವಕಾಶ ಕಲ್ಪಿಸುವ ಆರ್ಟಿಇ ಕಾಯ್ದೆಯ ಫಲಾನುಭವಿಗಳು ತೊಂದರೆ ಅನುವಿಸುತ್ತಿದ್ದಾರೆ ಎಂದು ನಾಮನಿದರ್ೇಶಿತ ಸದಸ್ಯ ಆಲ್ವಿನ್ ಮಿನೇಜಸ್ ದೂರಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಷ್ಕೃತ ಪಟ್ಟಿಯನ್ನು ಅನುಸರಿಸಿದರೆ ಮಾತ್ರ ಫಲಾನುಭವಿಗಳ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಅವರು ಹೇಳಿದರು. ಸುರೇಶ್ ಕೋಟ್ಯಾನ್ ಅವರೂ ಈ ಸಮಸ್ಯೆಯ ಬಗ್ಗೆ ಸಹಮತ ವ್ಯಕ್ತಪಡಿಸಿದರು.
ಮೂಡಬಿದರೆಗೆ ನೀರುಣಿಸುವ ಪುಚ್ಚಮೊಗರು ಡ್ಯಾಮ್ಗೆ ಇನ್ನೊಂದು ವೆಂಟೆಡ್ ಡ್ಯಾಮ್ ರಚಿಸುವ ಬಗ್ಗೆ ಪ್ರಸ್ತಾವನೆ ತಯಾರಿಸಲು ಸುರೇಶ್ ಕೋಟ್ಯಾನ್ ಆಗ್ರಹಿಸಿದರು.
ಬೋರ್ವೆಲ್ಗಳನ್ನು ರೀಚಾಜರ್್ ಮೂಲಕ ಪುನಶ್ಚೇತನಗೊಳಿಸಬೇಕೆಂದು ಪಿ.ಕೆ. ಥಾಮಸ್ ಒತ್ತಾಸಿದರು.
ರೂ. 81.62 ಕೋಟಿ ವೆಚ್ಚದ ಒಳಚರಂಡಿ ಯೋಜನೆಗೆ ಮಂಜೂರಾತಿ ನೀಡಲಾಯಿತು.
ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *