ಮೂಡುಬಿದರೆ: ಮಹಾರಾಷ್ಟ್ರದ ಪುಣೆಯಲ್ಲಿ ಫೆ. 18ರಿಂದ 20 ರವರೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಪ್ನಲ್ಲಿ ಮೂಡುಬಿದರೆ ಶೋರಿನ್ – ರಿಯೂ ಕರಾಟೆ ತಂಡವು 6 ಚಿನ್ನ, 3 ಬೆಳ್ಳಿ, 1 ಕಂಚಿನ ಪದಕ ಪಡೆದು ಉತ್ತಮ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
.ಅಂತಾರಾಷ್ಟ್ರೀಯ ಕರಾಟೆಯಲ್ಲಿ ಸಾಧನೆ ಮಾಡಿದ ಶೊರಿನ್ ರಿಯೂ ತಂಡ

ಹುಡುಗರ ಕುಮಿಟೆ ವಿಭಾಗದಲ್ಲಿ ಪ್ರಖ್ಯಾತ್ ಚಿನ್ನದ ಪದಕ, ಆಸಿಫ್ ಅಹ್ಮದ್ ಚಿನ್ನದ ಪದಕ, ಅಮೃತ್ ಬಿ.ವಿ. ಚಿನ್ನದ ಪದಕ, ಅಕ್ಷಯ್ ಬಿ. ಬೆಳ್ಳಿ ಪದಕ ಪಡೆದಿದ್ದಾರೆ.
ಹುಡುಗಿಯರ ಕುಮಿಟೆ ವಿಭಾಗದಲ್ಲಿ ದಿಲ್ನಾಝ್ ಬಾನು ಚಿನ್ನದ ಪದಕ, ಸಹನಾ ಶೆಟ್ಟಿ ಚಿನ್ನದ ಪದಕ, ಸೋನಿ ಶೆಟ್ಟಿ ಚಿನ್ನದ ಪದಕ, ಮಮತಾ ಬೆಳ್ಳಿ ಪದಕ ಪಡೆದವರಾಗಿದ್ದಾರೆ.
ಕಟಾ ವಿಭಾಗದಲ್ಲಿ ದಿಲ್ನಾಝ್ ಬಾನು ಬೆಳ್ಳಿ ಪದಕ, ಅಕ್ಷಯ ಬಿ. ಕಮಚಿನ ಪದಕ ಪಡೆದರು. ಮೇ ತಿಂಗಳಿನಲ್ಲಿ ಭೂತಾನ್ನಲ್ಲಿ ನಡೆಯಲಿರುವ ಕರಾಟೆ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ.
ಕರಾಟೆಪಟುಗಳು ಶೋರಿನ್ – ರಿಯೂ ಕರಾಟೆಯ ಮುಖ್ಯ ಶಿಕ್ಷಕ ನದೀಮ್ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
