ಮೂಡುಬಿದರೆ: ಫ್ಲೆಕ್ಸ್,ಬ್ಯಾನರ್ನಂತ ಜಾಹೀರಾತು ಫಲಕಗಳು ಮೂಡುಬಿದರೆ ಪುರಸಭೆಯ ಪ್ರಮುಖ ಆದಾಯಗಳ ಮೂಲಗಳಲ್ಲೊಂದು. ಅನಧಿಕೃತ ಫ್ಲೆಕ್ಸ್ಗಳ ಬಗ್ಗೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಅಧಿಕಾರವಿರುವ ಪುರಸಭೆಯವರೇ ಯಾವುದೇ ಅನುಮತಿ ಪಡೆಯದೆ ಫ್ಲೆಕ್ಸ್ ಹಾಕಿದರೆ ಹೇಗೆ?.

. ಜನಪ್ರತಿನಿಧಿ ಉದಾಸೀನತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಪುರಸಭಾ ಆದಾಯಕ್ಕೆ ಕತ್ತರಿ!
ಮೂಡುಬಿದರೆ ಪ್ರಮುಖ ಸ್ಥಳಗಳಲ್ಲಿ ಪುರಸಭಾ ಸದಸ್ಯರೇ ಹಾಕಿದ 6 ಫ್ಲೆಕ್ಸ್ಗಳು ಅನಧಿಕೃತವಾಗಿದೆ ಎಂಬ ಮಾಹಿತಿಯು ಆರ್ಟಿಐ ಮೂಲಕ ಬೆಳಕಿಗೆ ಬಂದಿದೆ. ಮೂಡುಬಿದರೆಯ ಆರ್ಟಿಐ ಕಾರ್ಯಕರ್ತ ಜೈಸನ್ ತಾಕೋಡೆ ಅವರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ, ಮೂಡುಬಿದರೆ ವಿವಿಧ ಪ್ರದೇಶಗಳಲ್ಲಿ ಜನಪ್ರತಿನಿಧಿಗಳು ಹಾಕಿರುವ ಆಯ್ದ 6 ಫ್ಲೆಕ್ಸ್ಗಳ ಅಳವಡಿಕೆಗೆ ಪುರಸಭೆಗೆ ನೀಡಿದ ಅರ್ಜಿ ಹಾಗೂ ಮೊತ್ತದ ರಶೀಧಿಯ ದೃಢೀಕೃತ ಪ್ರತಿ ಕೇಳಿದ್ದಾರೆ. ವಿಚಿತ್ರವೆಂದರೆ ಅವರು ಕೇಳಿದ ಆರೂ ಫ್ಲೆಕ್ಸ್ಗಳ ಬಗ್ಗೆ ಪುರಸಭೆ ನೀಡಿದ ಉತ್ತರ `ಯಾವುದೇ ಅರ್ಜಿ ನೀಡಿರುವುದಿಲ್ಲ’. ಪುರಸಭಾ ಅಧ್ಯಕ್ಷರು ಸಹಿತ ಸದಸ್ಯರು ಪ್ರಮುಖ ಸಮಾರಂಭಗಳಿಗೆ ಹಾಕಿದ ಈ ಫ್ಲೆಕ್ಸ್ಗಳಲ್ಲವೂ ಪುರಸಭೆಯ ಅನುಮತಿ ಪಡೆಯದೇ ಹಾಕಿರುವುದೆಂದು ಪುರಸಭಾ ಅಧಿಕಾರಿಗಳು ನೀಡಿದ ಪ್ರತಿಯಿಂದಲೇ ಸ್ಪಷ್ಟವಾಗುತ್ತದೆ.

mbd_feb25_2 (3)

mbd_feb25_2 (2)

mbd_feb25_2 (4)

ಅನುಮತಿಯಿಲ್ಲದ ಫ್ಲೆಕ್ಸ್ಗಳಿವು:
ರಿಂಗ್ ರೋಡ್ಗೆ 5 ಕೋಟಿ ಅನುದಾನ ನೀಡಿದ ಬಗ್ಗೆ ಅಭಿನಂದನೆ ಕೋರಿ ಮೂಡುಬಿದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೇಘನಾಥ ಶೆಟ್ಟಿ, ಪುರಸಭಾ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಉಪಾಧ್ಯಕ್ಷೆ ಎಲಿಜಾ ಮೆನೇಜಸ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಬಶೀರ್ ಅವರು ಹಳೆ ಪೊಲೀಸ್ ಠಾಣೆಗೆ ಅಳವಡಿಸಿರುವ ಫ್ಲೆಕ್ಸ್ಗೆ ಅನುಮತಿ ಪಡೆದಿಲ್ಲ. ಪುರಸಭೆಯ ಪ್ರಮುಖ ಮೂರು ಹುದ್ದೆಗಳಿರುವವರ ನಿಯಮ ಉಲ್ಲಂಘನೆ ಇದಾದರೆ, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್ ಹಾಗೂ ಅನಿಲ್ ಲೋಬೋ `ರಿಂಗ್ ರೋಡ್ ಶಂಕುಸ್ಥಾಪನೆ ಆಗಮಿಸುವ ಸಚಿವರಿಗೆ ಹಾರ್ದಿಕ ಸ್ವಾಗತ ಕೋರಿರುವ ಫ್ಲೆಕ್ಸ್ಗೂ ಅರ್ಜಿ  ನೀಡಿಲ್ಲ. ಅನಿಲ್ ಲೋಬೋ ಅವರು ಮೆಸ್ಕಾಂ ಬಳಿ ಮುಖ್ಯ ರಸ್ತೆ ಬದಿಯಲ್ಲಿ ಹಾಗೂ ವಿದ್ಯಾಗಿರಿ ಬಳಿಯಲ್ಲಿ ಅಳವಡಿಸಿರುವ ಕ್ರಿಸ್ಮಸ್ ಹಾಗೂ ಹೊಸವರ್ಷದ ಶುಭಾಶಯ ಫ್ಲೆಕ್ಸ್ನದ್ದೂ ಇದೆ ಕಥೆ. ವಿದ್ಯಾಗಿರಿ ಬಳಿ ಹಾಕಿದ ಕಂಬಳಕ್ಕೆ ಶುಭಕೋರುವ ಫ್ಲೆಕ್ಸ್ ಅಳವಡಿಕೆ ಸಂದರ್ಭದಲ್ಲೂ ಸದಸ್ಯ ಅನಿಲ್ ಲೋಬೋ ಪುರಸಭೆ ಅನುಮತಿ ಪಡೆಯುವುದನ್ನು ಮರೆತಿದ್ದಾರೆ.
ಸ್ಪಷ್ಟ ಮಾಹಿತಿಯೂ ಇಲ್ಲ:
ಕಳೆದ 3 ತಿಂಗಳಲ್ಲಿ ಅನಧಿಕೃತವಾಗಿ ಅಳವಡಿಸಿದ ಯಾರ್ಯಾರ ಎಷ್ಟ ಬ್ಯಾನರ್ಗಳನ್ನು ತೆರವುಗೊಳಿಸಲಾಗಿದೆ? ಮತ್ತು ದಂಡ ವಿಧಿಸುವ ಜೊತೆಗೆ ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ? ಎನ್ನುವ ಪ್ರಶ್ನೆಗೂ ಪುರಸಭೆಯಿಂದ ಸ್ಪಷ್ಟ ಮಾಹಿತಿಯಿಲ್ಲ. `ಅನಧಿಕೃತವೆಂದು ಕಂಡು ಬಂದ ಬ್ಯಾನರ್ಗಳನ್ನು ತೆರವುಗೊಳಿಸಲಾಗಿದೆ’ ಎಂಬ ಉತ್ತರವಷ್ಟೇ ಲಭಿಸಿದೆ. ಅಸಲಿಗೆ ಪುರಸಭಾ ಸದಸ್ಯರ ಅನಧಿಕೃತ ಫ್ಲೆಕ್ಸ್ಗಳನ್ನು ಅಳವಡಿಸಿದ ತಿಂಗಳವರೆಗೂ ತೆರವುಗೊಳಿಸುವ ಗೋಜಿಗೆ ಪುರಸಭೆಯವರು ಹೋಗಲಿಲ್ಲ.
.ಯಶೋಧರ ವಿ.ಬಂಗೇರ

By suddi9

Leave a Reply

Your email address will not be published. Required fields are marked *