ಮೂಡುಬಿದರೆ: ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳು ಆಶ್ರಯದಲ್ಲಿ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಮೀಡಿಯಾ ಬಝ್-2014 ಮಾದ್ಯಮ ಉತ್ಸವ ಹಾಗೂ ಸ್ಪರ್ಧೆಗಳಲ್ಲಿ ಎಸ್‍ಡಿಎಂಗೆ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಸಮಗ್ರ ಹಾಗೂ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು ಪತ್ರಿಕೋದ್ಯಮ ವಿಭಾಗ ದ್ವಿತೀಯ ಸ್ಥಾನ ಪಡೆದಿದೆ.

buzz

buzz1
ಫಲಿತಾಂಶ:
ರೆಡಿಯೋ ಫಿಚರ್- ಕಾರ್ಕಳ ಭುವನೇಂದ್ರ ಕಾಲೇಜು( ಪ್ರಥಮ), ಮಂಗಳೂರು ಸೈಂಟ್ ಅಲೋಶಿಯಸ್(ದ್ವಿತೀಯ)
ಕಿರುಚಿತ್ರ- ಉಜಿರೆ ಎಸ್‍ಡಿಎಂ(ಪ್ರ), ಸುರತ್ಕಲ್ ಗೋವಿಂದದಾಸ್ ಕಾಲೇಜು(ದ್ವಿ),
ಸಾಕ್ಷ್ಯಚಿತ್ರ- ಕಾರ್ಕಳ ಭುವನೇಂದ್ರ ( ಪ್ರ), ಉಡುಪಿ ಎಂಜಿಎಂ(ದ್ವಿ)
ನಿರೂಪಣೆ- ಸೈಂಟ್ ಅಲೋಶಿಯಸ್(ಪ್ರ), ಮಂಗಳೂರು ವಿ.ವಿ ಕಾಲೇಜು(ದ್ವಿ)
ವ್ಯಂಗ್ಯಚಿತ್ರ-ತುಮಕೂರು ಕಾಲೇಜು( ಪ್ರ), ಎಸ್‍ಡಿಎಂ, ಅಲೋಶಿಯಸ್(ದ್ವಿ)
ಪುಟ ವಿನ್ಯಾಸ-ಬಳ್ಳಾರಿ ಶಾರಾದ ದೇವಿ ಕಾಲೇಜು(ಪ್ರ), ಕಾರ್ಕಳ ಭುವನೇಂದ್ರ ಕಾಲೇಜು(ದ್ವಿ)
ಪೋಸ್ಟರ್ ಮೇಕಿಂಗ್-ಎಸ್‍ಡಿಎಂ ಉಜಿರೆ(ಪ್ರ), ಅಲೋಶಿಯಸ್(ದ್ವಿ)
ರಸಪ್ರಶ್ನೆ- ಅಲೋಶಿಯಸ್(ಪ್ರ), ಉಜಿರೆ ಎಸ್‍ಡಿಎಂ(ದ್ವಿ)
ಛಾಯಾಗ್ರಾಹಣ- ಮಂಗಳೂರು ವಿ.ವಿ(ಪ್ರ), ಎಸ್‍ಡಿಎಂ (ದ್ವಿ)
ಮ್ಯಾಡ್ ಆ್ಯಡ್- ಗೋವಿಂದದಾಸ್( ಪ್ರ), ಅಲೋಶಿಯಸ್(ದ್ವಿ),
ವಸ್ತು ಪ್ರಚಾರ- ಎಸ್‍ಡಿಎಂ(ಪ್ರ), ಅಲೋಶಿಯಸ್(ದ್ವಿ)
ಸಮಾರೋಪ: ಶುಕ್ರವಾರ ನಡೆದ ಮೀಡಿಯಾ ಬಝ್ ಸಮಾರೋಪ ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಸಮಾರೋಪ ಭಾಷಣ ಮಾಡಿದರು.
ಮಾದ್ಯಮ, ರಾಜಕಾರಣ ಸಹಿತ ಪ್ರತಿಯೊಂದು ಕ್ಷೇತ್ರದಲ್ಲಿ ವೃತ್ತಿಪರತೆ, ಬದ್ಧತೆ ಮುಖ್ಯ.
ಮಾಧ್ಯಮಕ್ಕೆ ಸಮಾಜವನ್ನು ಜಾಗೃತಿಗೊಳಿಸಲು ಸಾಧ್ಯ.ಅವುಗಳು ಮಾಡುವ ತಪ್ಪುಗಳಿಂದಾಗಿ ಸಮಾಜಕ್ಕೆ ಘಾಸಿಯೂ ಆಗಬಹುದು. ಯಾವ ಮೌಲ್ಯಗಳ ಬಗ್ಗೆ ಪತ್ರಕರ್ತ ವರದಿ ಮಾಡುತ್ತಾನೋ ಆ ಮೌಲ್ಯಗಳು ಆತನಲ್ಲಿ ಇಲ್ಲದಿದ್ದರೆ ಆತನಿಗೆ ಅಂತಹ ವಿಷಯಗಳ ಕುರಿತು ವರದಿ ಮಾಡುವ ನೈತಿಕತೆಯಿಲ್ಲ. ಮಾಹಿತಿ ಕಳೆ ಹಾಕುವ ಸಾಮಥ್ರ್ಯ, ಸಾಮಾಜಿಕ ಬದ್ಧತೆಯಿದ್ದರೆ ಮಾಧ್ಯಮ ಆರೋಗ್ಯಕರವಾಗಿರುತ್ತದೆ.ಸಮಾಜದಲ್ಲಿರುವ ನಕಾರಾತ್ಮಕ ಅಂಶಗಳು ಮಾಧ್ಯಮ ಕ್ಷೇತ್ರದಲ್ಲಿದ್ದರೂ ಅದು ಸುಂದರ ಅವಕಾಶ. ಸರ್ಕಾರ ಯೋಚನೆ,ಚಿಂತನೆ ಹಾಗೂ ಜನತೆಯ ಸೇತುವೇ ಮಾಧ್ಯಮ.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಸ್ಮಿತಾ ಐತಾಳ್, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯ ಜೀವನ್ ಉಪಸ್ಥಿತರಿದ್ದರು.
ಉಪನ್ಯಾಸಕ ಶ್ರೀನಿವಾಸ ಪೆಜತ್ತಾಯ ಸ್ವಾಗತಿಸಿದರು. ಸಮೀರಾ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ಮೀಡಿಯಾ ಬಝ್‍ನ ಸಂಯೋಜಕಿ ದೇವಿಶ್ರೀ ಉತ್ಸವದ ವರದಿ ವಾಚಿಸಿದರು. ದೀಕ್ಷಾ ಶೆಟ್ಟಿ ಸ್ಪರ್ಧಾ ವಿಚೇತರ ವಿವರ ನೀಡಿದರು.
ಡಾ.ಕೃಷ್ಣ ಮೋಹನ್ ಪ್ರಭು, ಸುಧಾಕರ ಜೈನ್, ರವಿ ಪೊಸವಣಿಕೆ, ವಿವೇಕ್ ನಂಬಿಯಾರ್, ರವಿ ಮೂಡುಕೊಣಾಜೆ, ಚೆಂಗಪ್ಪ, ಬಾಸ್ಕರ್ ನೆಲ್ಯಾಡಿ, ಸನತ್ ಶೆನವ, ಶ್ರೇಯಾ ಶೆಟ್ಟಿ ಶರತ್ ಸ್ಪರ್ಧೆಗಳ ತೀರ್ಪುಗಾರರಾಗಿದ್ದರು.

By suddi9

Leave a Reply

Your email address will not be published. Required fields are marked *