ಮೂಡುಬಿದಿರೆ : ನಮ್ಮ ದೇಶದಲ್ಲಿ ಬೇರೆ ಬೇರೆ ಧರ್ಮಗಳಿದ್ದು ಪ್ರತಿಯೊಂದು ಧರ್ಮವು ನಾವೆಲ್ಲರು ಒಂದೇ ಎಂಬ ಸಂದೇಶವನ್ನು ನೀಡಿವೆ. ಎಲ್ಲಾ ಧರ್ಮದವರೊಂದಿಗೆ ಸಹಬಾಳ್ವೆಯೊಂದಿಗೆ ಬದುಕುವುದೇ ನಮ್ಮ ಧ್ಯೇಯವಾಗಬೇಕು ಇಸ್ಲಾಂ ಧರ್ಮವು ಕೂಡಾ ಇದನ್ನೇ ಸೂಚಿಸುತ್ತದೆ ಆದ್ದರಿಂದ ನಾವೆಲ್ಲರೂ ಒಂದಾಗಿ ಧರ್ಮದ ನೆಲೆಯಲ್ಲಿ ಸಹಬಾಳ್ವೆಯೊಂದಿದೆ ಬಾಳೋಣ ಎಂದು ಕಾಸರಗೋಡಿನ ಖಾಝಿ ಶೈಖುನಾ ಆಲಿಕುಟ್ಟಿ ಮುಸ್ಲಿಯಾರ್ ಹೇಳಿದರು.
ಅವರು ಕಳೆದ 40 ವರ್ಷಗಳ ಇತಿಹಾಸವಿರುವ 2 ವರ್ಷಗಳ ಅಂತರಲ್ಲಿ ನಡೆಯುತ್ತಾ ಬರುತ್ತಿರುವ ತೋಡಾರು ಬದ್ರಿಯಾ ಸುನ್ನಿ ಜುಮ್ಮಾ ಮಸೀದಿಯಲ್ಲಿ ಏಳು ದಿನಗಳ ಕಾಲ ನಡೆದ ಮಖಾಂ ಉರೂಸ್ನ ಸಮಾರೋಪ ಸಮಾರಂಭವನ್ನು ಶನಿವಾರ ರಾತ್ರಿ ಉದ್ಘಾಟಿಸಿ ಮಾತನಾಡಿದರು.
ಧರ್ಮದ ನೆಲೆಯಲ್ಲಿ ಸಹಬಾಳ್ವೆಯೊಂದಿಗೆ ಬಾಳೋಣ : ಶೈಖುನಾ ಆಲಿಕುಟ್ಟಿ ಮುಸ್ಲಿಯಾರ್
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ ಮಾತನಾಡಿ ನಾವೆಲ್ಲರೂ ಭಾರತೀಯರು. ಹಸಿರು ಮತ್ತು ಕೇಸರಿ ಬಣ್ಣ ಇದು ನಮ್ಮ ಅಭಿಮಾನದ ಸಂಕೇತ ಇದಕ್ಕಾಗಿ ನಾವು ಜಗಳ ಮಾಡಬೇಕಾಗಿಲ್ಲ. ಅನ್ಯೋನ್ಯತೆಯಿಂದ ಅಣ್ಣ-ತಮ್ಮಂದಿರಂತೆ ಬಾಳಿ ದೇಶ ಕಟ್ಟುವ ಕೆಲಸವನ್ನು ನಾವು ಮಾಡಬೇಕಾಗಿದೆ. ಜಿಲ್ಲೆಯಲ್ಲಿ ಕೆಲವೊಂದು ಸಲ ಅಹಿತಕರ ಘಟನೆಗಳು ನಡೆಯುತ್ತಿದ್ದು ಇದಕ್ಕೆ ಮೊಬೈಲ್ಗಳು ಕಾರಣವಾಗಿದೆ ಇಂತಹ ಘಟನೆಗಳು ಕೇವಲ “ಜಿರೋ” ಪಸರ್ೆಂಟ್ ಜನರಿಂದ ನಡೆಯುತ್ತಿದೆ ಇದಕ್ಕೆ ಸಮಾಜದಲ್ಲಿರುವ ಎಲ್ಲಾ ಜನರಿಗೆ ಅಪವಾದ ಹಾಕುವುದು ಸರಿಯಲ್ಲ. ವಿದ್ಯಾಥರ್ಿಗಳು ಧಾಮರ್ಿಕ ಮತ್ತು ಔದ್ಯೋಗಿಕ ಶಿಕ್ಷಣವನ್ನು ಪಡೆದು ಭವಿಷ್ಯತ್ತನ್ನು ಉತ್ತಮಗೊಳಿಸಬೇಕು ಪ್ರಾಣಿಗಳಂತೆ ವತರ್ಿಸಬಾರದು ಎಂದು ಇತ್ತೀಚೆಗೆ ಗೋವಿಂದಾಸ್ ಕಾಲೇಜಿನಲ್ಲಿ ನಡೆದ ಪ್ರಕರಣದಲ್ಲಿ ಹುಡುಗ ಹಾಗೂ ಹುಡುಗಿಯರದ್ದೂ ತಪ್ಪಿದೆ ಎಂದು ಹೇಳಿದ ಅವರು ಹೆತ್ತವರು ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕೆಂದರು.
ತೋಡಾರು ಮುದರ್ರಿಸ್ ಬಿ.ಎಸ್.ಜೆ.ಎಂನ ಇಸ್ಮಾಯಿಲ್ ಮದನಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕೇರಳ ಕೊಲ್ಲಂನ ಮಿರಾನಿ ಬಾಖಲಿ ಮುಖ್ಯ ಪ್ರಭಾಷಣವನ್ನು ಮಾಡಿದರು.
ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಚೊಕ್ಕಬೆಟ್ಟು 9ನೇ ಬ್ಲಾಕ್ನ ಜುಮ್ಮಾ ಮಸೀದಿಯ ಅಬ್ದುಲ್ ಅಝೀಝ್ ದಾರಿಮಿ, ಸಚಿವ ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ತೋಡಾರು ಬಿ.ಎಸ್.ಜೆ.ಎಂನ ಅಧ್ಯಕ್ಷ ಎಂ.ಎ.ಎಸ್. ಅಬೂಬಕ್ಕರ್, ಉರೂಸ್ ಸಮಿತಿಯ ಅಧ್ಯಕ್ಷ ಟಿ.ಎಚ್.ಇಸ್ಮಾಯಿಲ್, ಉಪಾಧ್ಯಕ್ಷ ಎಂ.ಜಿ.ಅಬ್ದುಲ್ ಸಲಾಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ತೋಡಾರು ಸದರ್ ಮುಅಲ್ಲಿಂ ಮುಹಮ್ಮದ್ ರಫೀಕ್ ದಾರಿಮಿ ಸ್ವಾಗತಿಸಿದರು. ಕ್ಯಾಲಿಕೆಟ್ ಖಾಝಿ ಅಸ್ಸಯ್ಯಿದ್ ಮುಹಮ್ಮದ್ ಜಮಲುಲೈಲಿ ತಂಙಳ್ ವಿಶೇಷ ದುವಾ ನೆರವೇರಿಸಿದರು. ತೋಡಾರು ಬಿ.ಎಸ್.ಜೆ.ಎಂನ ಉಪಾಧ್ಯಕ್ಷ ಟಿ.ಅಬ್ದುಲ್ ಸಲಾಂ ಬೂಟ್ ಬಜಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಮೆರವಣಿಗೆ ನಡೆಯಿತು. ಉರೂಸ್ ಅಂಗವಾಗಿ ಮಸೀದಿಯನ್ನು ವಿದ್ಯುತ್ ದೀಪಗಳಿಂದ ಆಲಂಕೃತಗೊಳಿಸಲಾಗಿತ್ತು. ಈ ಉರೂಸ್ನಲ್ಲಿ ಊರು-ಪರ ಊರಿನ ಮಸ್ಲಿಂ ಮತ್ತು ಹಿಂದೂ ಧಮರ್ಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಚಿತ್ರ : 1 ಮೂಡ್ ಉರೂಸ್, ಉರೂಸ್ 2



