dhoni
ದೆಹಲಿ: ತನ್ನ ವಿರುದ್ಧ ಮ್ಯಾಚ್ ಫಿಕ್ಸಿಂಗ್ ವಿಷಯಕ್ಕೆ ಸಮಬಂಧಪಟ್ಟಂತೆ ನೇರ ಆರೋಪ ಮಾಡಿದ್ದ ಜೀ ನ್ಯೂಸ್ ವಿರುದ್ಧ ಟೀಮ್ ಇಂಡಿಯಾ ಮಹೇಂದ್ರ ಸಿಂಗ್ ಧೋನಿ 100 ಕೋಟಿ ಪರಿಹಾರ ಕೇಳಿ ಮದ್ರಾಸ್ ಹೈಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ಧಾರೆ. ಧೋನಿ ಅರ್ಜಿಯ ಪರಿಶೀಲನೆ ನಡೆಸಿದ ಕೋರ್ಟ್, ಧೋನಿ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಸಂಬಂಧಿತ ಯಾವುದೇ ಸುದ್ದಿ ಪ್ರಕಟಿಸದಂತೆ ಜೀ ಗ್ರೂಪ್`ಗೆ ಮಧ್ಯಂತರ ಆದೇಶ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಧೋನಿ ನಾನು ಯಾವುದೇ ಮ್ಯಾಚ್ ಫಿಕ್ಸಿಂಗ್`ನಲ್ಲಿ ಭಾಗವಹಿಸಿಲ್ಲ ಸುಳ್ಳು ವರದಿ ಪ್ರಕಟಿಸುವ ಮೂಲಕ ಕಷ್ಟ ಪಟ್ಟು ಸಂಪಾದಿಸಿದ ಗೌರವವನ್ನ ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

By suddi9

Leave a Reply

Your email address will not be published. Required fields are marked *