ಬೆಳ್ತಂಗಡಿ: ಇಲ್ಲಿನ ಗುರುವಾಯನಕೆರೆ ಸಮೀಪದ ಮದ್ದಡ್ಕ ಎಂಬಲ್ಲಿ ಎರಡು ಬೈಕ್‍ಗಳ ಮಧ್ಯೆ ಸಂಭವಿಸಿದ ಅಪಘಾತಕ್ಕೆ ಉಜಿರೆಯ ಎಸ್‍ಡಿಎಂ ಕಾಲೇಜ್‍ನ ವಿದ್ಯಾರ್ಥಿ ಸಹಿತ ಇಬ್ಬರು ಮೃತಪಟ್ಟ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ.

ಎಸ್‍ಡಿಎಂ ಕಾಲೇಜ್‍ನ ವಿದ್ಯಾರ್ಥಿ ಜಾಯಿಲ್ ಸ್ಟೆಫೆನ್ ಹಾಗೂ ಮನೋಹರ್(40) ಮೃತ ದುರ್ದೈವಿಗಳು.
ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‍ನಿಂದ ಚಿಮ್ಮಿದ ಮನೋಹರ್ ಅವರಿಗೆ ಕಲ್ಲೊಂದು ತಲೆಗೆ ತಾಘಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟಟರೆಂದು ಹೇಳಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
