ಮಂಗಳೂರು: ಕೂಳೂರು ಕುದುರೆಮುಖ ವೃತ್ತದ ಸಮೀಪ ಸೋಮವಾರ ಸಂಜೆ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳ ಪೈಕಿ ಒಬ್ಬಾತ ಮೃತಪಟ್ಟಿದ್ದಾನೆ. ಚಿಲಿಂಬಿ ನಿವಾಸಿ, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ವೈಭವ್ ಸಾಯಿನಾಥ್ ಶೆಟ್ಟಿ (20) ಮೃತ ವಿದ್ಯಾರ್ಥಿ. ಈತನ ಗೆಳೆಯ ಸಹಸವಾರ ಪ್ರತೀಕ್ (20) ಗಂಬೀರವಾಗಿ ಗಾಯಗೊಂಡಿದ್ದಾನೆ.. ಇವರಿಬ್ಬರು ಜತೆಯಲ್ಲಿ ಕೆಟಿಎಂ 200 ಸಿಸಿ ಬೈಕ್‍ನಲ್ಲಿ ತಣ್ಣೀರುಬಾವಿ ಬೀಚ್‍ಗೆ ತೆರಳಿ ಮರಳಿ ಬರುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ.
ತಣ್ಣೀರುಬಾವಿಯಿಂದ ಕುದುರೆಮುಖ ವೃತ್ತದಿಂದ ನೇರವಾಗಿ ಹೆದ್ದಾರಿಗೆ ವೇಗವಾಗಿ ಬರುತ್ತಿದ್ದ ಬೈಕ್ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಹಿಂಬದಿಯಲ್ಲಿ ಕುಳಿತಿದ್ದ ವೈಭವ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಬೈಕ್ ಸವಾರ ಪ್ರತೀಕ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆಂದು ಹೇಳಲಾಗಿದೆ. ಸುರತ್ಕಲ್ ಉತ್ತರ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

