ಬಂಟ್ವಾಳ: ಶ್ರೀ ಧಾಮ ಮಾಣಿಲ ಕ್ಷೇತ್ರದಲ್ಲಿ ಕುಂಭಾಭಿಷೇಕ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಮಂಗಳೂರು ಮಂಗಳಾ ದೇವಿ ದೇವಸ್ಥಾನದಿಂದ ಹೊರಟ ಹೊರೆಕಾಣಿಕೆ ಬಿ.ಸಿರೋಡಿಗೆ ಆಗಮಿಸಿ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಿಂದ ಬಂಟ್ವಾಳ ತಾಲೂಕಿನ ಹೊರೆ ಕಾಣಿಕೆಯೊಂದಿಗೆ ಮಾಣಿಲಕ್ಕೆ ಸಾಗಿತು. ಹೊರೆಕಾಣಿಕೆಯ ಜೊತೆ ಶ್ರೀ ವಿಠೋಭಾ ರುಕುಮಾಯಿ ದೇವರ ಮೂರ್ತಿಯನ್ನು ಕೊಂಡೊಯಲಾ ಯಿತು. ಈ ಸಂದರ್ಭ ಡಾ|ವಸಂತ ಬಾಳಿಗ, ಗೋಪಾಲ ಸುವರ್ಣ, ಕೇಶವ ಮಾಸ್ಟರ್, ದಯಾನಂದ ಕೆ. ಮತ್ತು ಶ್ರೀ ಧಾಮ ಮಾಣಿಲದ ಟ್ರಸ್ಟಿಗಳು ಉಪಸ್ಥಿತರಿದ್ದರು





