ಸುರತ್ಕಲ್ : ಅನ್ಯಕೋಮಿನ ವಿದ್ಯಾರ್ಥಿಯೊಬ್ಬ ವಿದ್ಯಾಥರ್ಿನಿಯರ ತೊಡೆ ಮೇಲೆ ಪವಡಿಸಿ ಪೋಸ್ ನೀಡಿದ ಪ್ರಕರಣದ ಬಳಿಕ ಸುರತ್ಕಲ್ ಹಲವು ವಿದ್ಯಾಮಾನಗಳಗೆ ಸಾಕ್ಷಿ ನುಡಿದಿದೆ. ಆ ಚತ್ರದಲ್ಲಿ ಕಾಣಿಸಿಕೊಂಡಿದ್ದ ಮೂವರು ವಿದ್ಯಾರ್ಥಿಗಳ ಮೇಲೆ ಭಾನುವಾರ ಬೆಳಿಗ್ಗೆ ಕಿಡಿಗೇಡಿಗಳು ಕಾಟಿಪಳ್ಳದ ಸಮೀಪ ಹಲ್ಲೆ ನಡೆಸಿದ ಬಗ್ಗೆ ವರದಿಯಾಗಿದೆ. ರಿತೇಶ್, ವಿನಿತ್ ಮತ್ತು ಮೊಹಮ್ಮದ್ ರಿಯಾಜ್ ಹಲ್ಲೆಗೊಳಗಾದವರು.


ಫೋಟೋದಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿಯನ್ನು ಉಪಾಯವಾಗಿ ಕರೆಸಿಕೊಂಡ ತಂಡ ಬಳಿಕ ಆತನ ನೆರವಿನಿಂದ ಇತರ ಇಬ್ಬರು ವಿದ್ಯಾಥರ್ಿಗಳನ್ನು ಕರೆಸಿಕೊಂಡು ಕಾಟಿಪಳ್ಳದ ಬಳಿ ಮೂವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಪೈಕಿ ಒಬ್ಬನಿಗೆ ಗಂಭೀರವಾದ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.
ತೊಡೆಯಲ್ಲಿ ಪವಡಿಸಿದ ಹುಡುಗ ನಾಪತ್ತೆಯಾಗಿದ್ದಾನೆ. ಹಲ್ಲೆಗೊಳಗಾದವರು ಫೋಟೋದ ಅಕ್ಕಪಕ್ಕದಲ್ಲಿ ನಿಂತ ಹುಡುಗರು ಎಂದು ತಿಳಿದುಬಂದಿದೆ. ಈ ಪೈಲಿ ಹಲ್ಲೆಗೊಳಗಾದ ರಿಯಾಜ್ಗೆ ಗಂಭೀರವಾದ ಏಟು ತಗಲಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
