ಸುರತ್ಕಲ್: ಫೇಸ್,ಬುಕ್ ವಾಟ್ಸಾಪ್‍ಗಳಲ್ಲಿ ವ್ಯಾಪಕ ಪ್ರಚಾರ ಪಡೆಯುತ್ತಿರುವ ಸುರತ್ಕಲ್‍ನ ಪ್ರತಿಷ್ಠಿತ ಕಾಲೇಜ್‍ನ ವಿದ್ಯಾರ್ಥಿನಿಯರು ಹಾಗೂ ಅವರ ತೊಡೆಯ ಮೇಲೆ ಪವಡಿಸಿ ಪೋಸ್ ನೀಡಿದ್ದ ವಿದ್ಯಾರ್ಥಿಗೆ ಕಾಲೇಜ್ ಆಡಳಿತ ಮಂಡಳಿ ಗೇಟ್‍ಪಾಸ್ ನೀಡಿದೆ ಎಂದು ತಿಳಿದುಬಂದಿದೆ.

hindu boy muslim girl
ಈ ಪ್ರಕರಣ ಸುರತ್ಕಲ್ ಠಾಣೆಯ ಮೆಟ್ಟಿಲು ಹತ್ತಿದ್ದು, ವಿದ್ಯಾರ್ಥಿಗಳ ಪೋಷಕರ ಸಮಕ್ಷಮ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಾಲೇಜ್‍ನಲ್ಲಿ ಏನು ನಡೆಯುತ್ತಿದೆ, ರೋಮಾನ್ಸ್ ಹೌದಾ ಅಲ್ವಾ? ಈ ಚಿತ್ರವನ್ನು ಕ್ಲಿಕ್ಕಿಸಿದವರು ಯಾರು? ವಾಟ್ಸಾಪ್‍ನಲ್ಲಿ ಹರಿಯಬಿಟ್ಟವರು ಯಾರು ಎಂಬೆಲ್ಲಾ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸೈಬರ್ ಕ್ರೈಂ ಪ್ರಕಾರ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.
ವಿದ್ಯಾರ್ಥಿನಿಯರ ಭಾವಚಿತ್ರ ಹಲವರ ಕಣ್ಣು ಕೆಂಪಾಗಿಸಿದೆ. ಯುವತಿಯರು ತಾವು ಫೇಸ್‍ಬುಕ್‍ನಲ್ಲಿ ಹಾಕಿದ್ದ ಫೋಟೋಗಳನ್ನು ಕೆಲವು ವಿಕೃತರು ವಾಟ್ಸಾಪ್‍ನಲ್ಲಿ ಹರಿಯಬಿಟ್ಟು ವಿಘ್ನ ಸಂತೋಷ ಪಡೆಯುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *