ಉಳ್ಳಾಲ : ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪಿಲಾರು ದಾರಂದಬಾಗಿಲು ಸಮೀಪ ಭಾನುವಾರ ಬೆಳಕಿಗೆ ಬಂದಿದೆ.

Suicide

Suicide 2

Suicide 4

Suicide 5

 

Suicide 7

ಪಿಲಾರು ನಿವಾಸಿ ದಿ. ವಿಶ್ವನಾಥ ಗಟ್ಟಿ ಎಂಬವರ ಪುತ್ರಿ ಸವಿತಾ ಗಟ್ಟಿ (23) ಆತ್ಮಹತ್ಯೆ ಮಾಡಿಕೊಂಡವರು. 2013ರಲ್ಲಿ ಬಿಎಸ್ಸಿ ಮೊದಲನೇ ವರ್ಷದ ಪದವಿ ವ್ಯಾಸಾಂಗ ಮಾಡುತ್ತಿದ್ದ ಸವಿತಾ ಪ್ರತಿಭಾವಂತೆಯಾಗಿದ್ದರು. ಈ ನಡುವೆ ಮಾನಸಿಕ ಖಿನ್ನತೆಗೆ ಒಳಗಾದ ಸವಿತಾಳಿಗೆ ಮನಸ್ಸಿಗೆ ಹೆಚ್ಚಿನ ಒತ್ತಡ ನೀಡದಂತೆ ವೈದ್ಯರು ನೀಡಿದ ಸಲಹೆಯಂತೆ ಆಕೆ ಕಾಲೇಜನ್ನು ತೊರೆದಿದ್ದಳು. ಬಳಿಕ ಮನೆಯಲ್ಲಿ ಇದ್ದವಳು ಖಿನ್ನತೆಗೆ ಔಷಧಿಯನ್ನು ಪಡೆಯುತ್ತಿದ್ದರು. ಖಿನ್ನತೆಯಿಂದ ಮೂರು ಬಾರಿ ಆತ್ಮಹತ್ಯೆಗೂ ಯತ್ನಿಸಿ ವಿಫಲವಾಗಿದ್ದರು. ಶನಿವಾರ ತಡರಾತ್ರಿ ಮನೆಯಿಂದ ನಾಪತ್ತೆಯಾಗಿದ್ದವರನ್ನು ಮನೆಮಂದಿ ಸ್ಥಳೀಯವಾಗಿ ಹುಡುಕಾಡಿದ್ದು, ಭಾನುವಾರ ಮುಂಜಾನೆ ದಾರಂದಬಾಗಿಲು ಸಮೀಪದ ಶ್ರೀಧರ್ ಆಳ್ವ ಎಂಬವರ ತೋಟದ ಬಾವಿಯಲ್ಲಿ ಶವ ಪತ್ತೆಯಾಗಿದೆ. ಉಳ್ಳಾಲ ಪಿಎಸ್ ಐ ಭಾರತಿ ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *