ಮಂಗಳೂರು, ಮಾ.16: ಮರ್ವಾ ಡೆವೆಲಪರ್ಸ್ ಕೈಕಂಬದ ಸೂರಲ್ಪಾಡಿ ರಸ್ತೆಯಲ್ಲಿ ನಿರ್ಮಿಸುತ್ತಿರುವ ಡೆ ಎಲೋರಾ ವಸತಿ ಸಂಕಿರ್ಣದ ಶಿಲಾನ್ಯಾಸ ಕಾರ್ಯಕ್ರಮ ಇಂದು ನೆರವೇರಿಸಲಾಯಿತು.
ಶಾಸಕ ಮೊಯ್ದಿನ್ ಬಾವಾ ಯೋಜನೆಗೆ ಜಾಲನೆ ನೀಡಿದರು. ಮುಸ್ಲಿಂ ಸೆಂಟ್ರಲ್ ಕಮೀಟಿಯ ಅಧ್ಯಕ್ಷ ಕೆ.ಎಸ್ ಮುಹಮ್ಮದ್ ಮಸೂದ್ ಬ್ರೋಶರ್ ಬಿಡುಗಡೆ ಮಾಡಿದರು. ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡಲಿಕ್ ಕಾಮತ್, ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ, ಸಂಸ್ಥೆಯ ಪ್ರವೃತ್ತಕ ಅಬ್ದುಲ್ ರಶೀದ್ ರ ಪುತ್ರರಾದ ಅದ್ನಾನ್ ಮತ್ತು ಹಿಶಾಮ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

16 marwa 6

16 marwa 5

16 marwa 3

16 marwa 1

16 7

ಮಿರ್ಜಾ ಅಲಿ ಸಾಹೇಬ್ ಮತ್ತು ಮೌಲಾನ ಅಬ್ದುಲ್ ಸಮದ್ ಮನಾದಿ ದುಆ ನೆರವೇರಿಸಿದರು. ಸಂಸ್ಥೆಯ ಪ್ರವೃತ್ತಕ ಅಬ್ದುಲ್ ರಶೀದ್ ವಂದಿಸಿದರು.
ಪ್ರಕೃತಿ ಸಹಜ ಪರಿಸರದಲ್ಲಿ ಹೆದ್ದಾರಿಗೆ ಹೊಂದಿಕೊಂಡು ನಿರ್ಮಾಣವಾಗುತ್ತಿರುವ ಡೆ ಎಲೋರಾ ವಸತಿ ಸಂಕಿರ್ಣದಲ್ಲಿ ಜಿಮ್, ಪಾರ್ಟಿಹಾಲ್, ಇಂಟರ್ಕಾಮ್ ಸೆಕ್ಯೂರಿಟಿ ಸಹಿತ ಎಲ್ಲರೀತಿಯ ಅತ್ಯಾಧುನಿಕ ಸೌಕರ್ಯಗಳು ಲಭ್ಯವಾಗಲಿವೆ. ಕಟ್ಟಡದಲ್ಲಿಯ ಪ್ರತಿಯೊಂದು ಮನೆಗೂ ಪ್ರಕೃತಿದತ್ತ ಗಾಳಿ, ಬೆಳಕು ಹರಿದು ಬರುವಂತೆ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ವಿಶಾಲ ಪಾರ್ಕಿಂಗ್ ಸೌಲಭ್ಯವಿದೆ. ಕಟ್ಟದ ಹತ್ತಿರಲ್ಲೇ ಪ್ರಾರ್ಥನಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳೂ ಇವೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.

By suddi9

Leave a Reply

Your email address will not be published. Required fields are marked *