ಸುದ್ದಿ9 ಪೊಳಲಿ: ಇಲ್ಲಿನ ರಾಮಕೃಷ್ಣ ತಪೋವನದಲ್ಲಿ ಗೃಹಿಣಿಯರು, ವಿದ್ಯಾರ್ಥಿಗಳು ಕೂಲಿ ಕಾರ್ಮೀಕರು ಮತ್ತು ಮಕ್ಕಳಿಗಾಗಿ ಕಂಪ್ಯೂಟರ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ತರಗತಿಯು ಆಧುನಿಕ ಸೌಕರ್ಯಗಳನ್ನು ಒಳಗೊಡಿಂದ್ದು ಗ್ರಾಮಸ್ಥರಿಗೆ ಅತಿ ಕಡಿಮೆ ವೆಚ್ಚದಲ್ಲಿ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತದೆ. ಕೇವಲ ನಿರ್ವಹಣಾ ವೆಚ್ಚವನ್ನೂ ಮಾತ್ರ ಫೀಸ್ ರೂಪದಲ್ಲಿ ಪಡೆಯಲಾಗುತ್ತದೆ. ಕಲಿಯಲು ಇಚ್ಛಿಸುವವರಿಗೆ ಸುಲಭವಾಗುವಂತ ಸಮಯಗಳಲ್ಲಿ ತರಬೇತಿ ನಡೆಸಲಾಗುವುದು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 7ರ ವರೆಗೆ ತರಗತಿಗಳು ನಡೆಯಲಿವೆ. ಈ ಮಧ್ಯದ ಯಾವುದೇ ಅವಧಿಯಲ್ಲಿ ಆಸಕ್ತರು ಕಂಪ್ಯೂಟರ್ ತರಗತಿಗೆ ಸೇರಿಕೊಳ್ಳಬಹುದು. ನಮ್ಮ ಕಲಿಕಾ ಕೇಂದ್ರಕ್ಕೆ ಸಾಕಷ್ಟು ಬಸ್ ವ್ಯವಸ್ಥೆಯೂ ಇದೆ. ನಾವು ಕೇವಲ ಎಡ್ಮಿಶನ್ ಶುಲ್ಕವನ್ನು ಮಾತ್ರ ತೆಗೆದುಕೊಳ್ಳುತ್ತೇವೆ. ವಿವಿಧ ಕೋಸರ್್ಗಳು ಅನುಕೂಲಕರ ಸಮಯಗಳಲ್ಲಿ ಲಭ್ಯವಿದೆ. ಹಾಗಾಗಿ ತಡವೇಕೆ ಕೂಡಲೇ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಮಕ್ಕಳಿಗಾಗಿ ವಿಶೇಷ ತರಗತಿಗಳು ಲಭ್ಯವಿದೆ

