ಬಂಟ್ವಾಳ: ಮಂಗಳೂರಿನ ನೆಪ್ರೊ ಯುರೋಲಜಿ ಚಾರಿಟೆಬಲ್ ಟ್ರಸ್ಟ್ ಜಿಲ್ಲೆಯ ಹಲವು ಪ್ರಮುಖ ಸಾಮಾಜಿಕ ಸಂಘಟನೆಗಳ ಸಹಯೋಗದೊಂದಿಗೆ ಜ. 13ರಿಂದ ಮಾ. 12ರ ತನಕ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಕಿಡ್ನಿ ಆರೋಗ್ಯ ಅಭಿಯಾನದ ಅಂಗವಾಗಿ ಸೋಮವಾರ ಬಿ.ಸಿ.ರೋಡಿನಲ್ಲಿ ಕಿಡ್ನಿ ಆರೋಗ್ಯ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.
17FKidni1
ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಅಶ್ವನಿ ಕುಮಾರ್ ರೈ ಅತಿಥಿಗಳಿಗೆ ಶುದ್ಧ ನೀರನ್ನು ಸಾಂಕೇತಿಕವಾಗಿ ಕುಡಿಸುವುದರ ಮೂಲಕ ಜಾಥಾವನ್ನು ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಿಡ್ನಿ ಆರೋಗ್ಯ ಅಭಿಯಾನ ಸಂಘಟನಾ ಸಮಿತಿ ಅಧ್ಯಕ್ಷ ಎಸ್. ಗಣೇಶ್ ರಾವ್ ಕಿಡ್ನಿ ಆರೋಗ್ಯ ಅಭಿಯಾನದಲ್ಲಿ ಹಮ್ಮಿಕೊಂಡಿರುವ ವಿವಿಧ ಚಟುವಟಿಕೆಗಳ ವಿವರ ನೀಡಿದರು.
ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಬಂಟ್ವಾಳ ತಾಲೂಕು ಕಚೇರಿ ತನಕ ನಡೆದ ಜಾಥಾದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶೇಶ ಶಯನ ಕಾರಿಂಜ, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ವಸಂತ ಬಾಳಿಗಾ, ಮಂಗಳೂರು ನೆಪ್ರೊ ಯುರೋಲಜಿ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಡಾ. ಮುಹಮ್ಮದ್ ಸಲೀಂ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಪ್ರೇಮ್ನಾಥ್ ಕೆ, ಜಮೀಯತುಲ್ ಫಲಾಹ್ನ ಕಾರ್ಯದರ್ಶಿ  ಶಾಹುಲ್ ಹಮೀದ್ ಕೆ.ಕೆ, ವಿ- ಕನೆಕ್ಟ್ನ ಅಧ್ಯಕ್ಷ ಆಶಿಕ್ ಕುಕ್ಕಾಜೆ, ಡಾ. ಮುಬಶ್ಶಿರ್, ಡಾ. ಝೈನುದ್ದೀನ್ ಮುಹಮ್ಮದ್, ಪ್ರಮುಖರಾದ ಜಬ್ಬಾರ್ ಪನ್ನೋಡಿ, ಫ್ರಾನ್ಸಿಸ್ ಸಾಲ್ದಾನಾ, ಹಮೀದ್ ಗೋಳ್ತಮಜಲು, ಮುಸ್ತಫಾ ಇರುವೈಲು, ಹಿದಾಯ ಫೌಂಡೇಶನ್ನ ಮಾಜಿ ಅಧ್ಯಕ್ಷ ಮುಹಮ್ಮದ್ ಹನೀಫ್ ಜಿ ಮತ್ತಿತರರು ಭಾಗವಹಿಸಿದ್ದರು. ಇನ್ಫೆಂಟ್ ಜೀಸಸ್ ಶಾಲೆ, ದೀಪಿಕಾ ಶಾಲೆ, ಸರಕಾರಿ ಪ್ರಥಮ ದರ್ಜೆ  ಕಾಲೇಜು, ಸರಕಾರಿ ಪಾಲಿಟೆಕ್ನಿಕ್ ಹಾಗೂ ಜೆಮ್ಸ್ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಾಹಿಸಿದ್ದರು. ರೋಟರಿ ಅಧ್ಯಕ್ಷ ಪ್ರಕಾಶ್ ಕಾರಂತ್ ಪ್ರತಿಜ್ಞಾ ವಿಧಿ ಬೋಧಿಸಿದರು. ಕಿಡ್ನಿ ಆರೋಗ್ಯ ಅಭಿಯಾನ ಸಂಘಟನಾ ಸಮಿತಿ ಪ್ರಧಾನ ಕಾರ್ಯದರ್ಶಿ  ಉಮರ್ ಯು. ಹೆಚ್. ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *