ಬಂಟ್ವಾಳ:ಸಮಾಜದಲ್ಲಿ ಪ್ರತೀಕಾರ ಮನೋಭಾವಕ್ಕೆ ಬದಲಾಗಿ ಪ್ರೀತಿ ಮತ್ತು ಶಾಂತಿಯುತ ಸಹಬಾಳ್ವೆ ಜೀವನದಲ್ಲಿ ಶಾಶ್ವತ ನೆಮ್ಮದಿ ಕರುಣಿಸುತ್ತದೆ. ಏಸುಕ್ರಿಸ್ತನು ನಮಗೆಲ್ಲರಿಗೂ ನೀಡಿದ ಸಂದೇಶವೂ ಇದೇ ಆಗಿದ್ದು, ಪರಸ್ಪರ ಸಹಬಾಳ್ವೆ ಮತ್ತು ಸೌಹಾರ್ದತೆಯಿಂದ ಒಟ್ಟು ಸಾಮಾಜಿಕ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಅಲೋಶಿಯಸ್ ಪಾವ್ಲ್ ಡಿ’ಸೋಜ ಹೇಳಿದ್ದಾರೆ. ತಾಲ್ಲೂಕಿನ ಲೊರೆಟ್ಟೊ ಮಾತಾ ಚರ್ಚ್ ನಲ್ಲಿ ಭಾನುವಾರ ಏರ್ಪಡಿಸಿದ್ದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ರೈಸ್ತರು ಶಿಸ್ತುಬದ್ಧ ಮತ್ತು ಗುಣಮಟ್ಟದ ಶಿಕ್ಷಣದ ಮೂಲಕ ಸಮಾಜಸೇವೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಮತಾಂತರ ಎಂಬ ಸುಳ್ಳು ಆರೋಪ ಕಾಡುತ್ತಿದೆ ಎಂದು ಅವರು ತಿಳಿಸಿದರು.
ಪ್ರೀತಿ ಸಹಬಾಳ್ವೆ ಜೀವನ ಅಗತ್ಯ: ಡಾ.ಅಲೋಸಿಯಸ್ ಪಾವ್ಲ್ ಡಿಸೋಜ

ಮಂಗಳೂರು ಧರ್ಮಪ್ರಾಂತ್ಯದ ಯು.ಎಫ್.ಎಸ್ ಸುಪೀರಿಯರ್ ಡೊರಿನ್ ಇವರು ‘ಅಮೃತ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಚೇಳುವಿಗೆ ಕುಟುಕುವ ಸ್ವಭಾವ ಮತ್ತು ಸನ್ಯಾಸಿಗೆ ರಕ್ಷಿಸುವ ಸ್ವಭಾವ ಎಂದು ಸಮಾಜ ಸೇವೆಯನ್ನು ವಿಶ್ಲೇಶಿಸಿದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರು ದಾನಿಗಳು ಮತ್ತು ಸೇವೆ ಸಲ್ಲಿಸಿದ ಹಿರಿಯ ಧರ್ಮಗುರುಗಳನ್ನು ಸನ್ಮಾನಿಸಿದರು.
ಬಂಟ್ವಾಳ ವಲಯ ಪ್ರಧಾನ ಧರ್ಮಗುರು ಮ್ಯಾಕ್ಸಿಂ ನೊರೊನ್ಹಾ ಶುಭ ಹಾರೈಸಿದರು.
ಸಮಿತಿ ಸಂಚಾಲಕ ಸಿಪ್ರಿಯಾನ್ ಡಿ’ಸೋಜ, ಉಪಾಧ್ಯಕ್ಷ ರಿಚರ್ಡ್ ಮಿನೇಜಸ್, ಶಾಸಕ ಜೆ.ಆರ್. ಲೋಬೊ, ತಾ.ಪಂ.ಸದಸ್ಯ ಎಪ್ರಿಯಂ ಸಿಕ್ವೇರಾ, ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷೆ ಬಬಿತಾ ಕೋಟ್ಯಾನ್, ಪಾಲನಾ ಮಂಡಳಿ ಕಾರ್ಯದರ್ಶಿ ಐರಿನ್ ಡಿ’ಸೋಜ ಮತ್ತಿತರರು ಇದ್ದರು.
ಚರ್ಚ್ ನ ಧರ್ಮಗುರು ಎಲಿಯಾಸ್ ಡಿ’ಸೋಜ ಸ್ವಾಗತಿಸಿದರು. ಅಮೃತೋತ್ಸವ ಸಮಿತಿ ಸಂಚಾಲಕ ವಾಲ್ಟರ್ ನೋರೋನ್ಹಾ ವಂದಿಸಿದರು., ಆಲ್ವಿನ್ ಪಿಂಟೋ ಮತ್ತು ಲೀನಾ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು.
