ಬಂಟ್ವಾಳ : ಭೂ ಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕು ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ, ಮಹಾಶಿವರಾತ್ರಿ ವೇ|ಮೂ| ಗಣೇಶ ತಂತ್ರಿ ವರ್ಕಾಡಿ ಅವರ ನೇತೃತ್ವದಲ್ಲಿ ಫೆ.15ರಂದು ಆರಂಭಗೊಂಡಿದ್ದು ಮಂಗಳವಾರ ಮಹಾಶಿವರಾತ್ರಿ ಆಚರಣೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಪಾರ್ವತಿ ಪರಮೇಶ್ವರ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರಗಿತು.
ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ಸಂಜೆ ಶ್ರೀ ಪಾರ್ವತಿ ಸನ್ನಿಯಲ್ಲಿ ಉತ್ಸವ, ಶ್ರೀ ಕಾರಿಂಜೇಶ್ವರ ಸನ್ನಿಯಲ್ಲಿ ಏಕಾದಶ ರುದ್ರಾಭಿಷೇಕ, ರಾತ್ರಿ ತುಲಾಭಾರ ಸೇವೆ, ರಂಗಪೂಜೆ, ಸೂರ್ಯಸ್ತದಿಂದ ಸೂರ್ಯೋದಯದ ವರೆಗೆ ಭಜನಾಕಾರ್ಯಕ್ರಮ, ಮಹಾಶಿವರಾತ್ರಿ ಜಾಗರಣೆ ಮತ್ತು ಕಂಚು ಬೆಳಕು ಸೇವೆಗಳು ನಡೆಯಿತು.
ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ , ಬಂಟ್ವಾಳ ಹಿರಿಯ ನ್ಯಾಯಾಶ ಚಂದ್ರಶೇಖರ ಯು., ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಪಿ.ಜಿನರಾಜ ಆರಿಗ, ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ , ತಾ.ಪಂ.ಉಪಾಧ್ಯಕ್ಷೆ ವಿಲಾಸಿನಿ, ಸದಸ್ಯರಾದ ಬಿ.ಪದ್ಮಶೇಖರ ಜೈನ್, ವಿನಯ ನಾಯಕ್, ಆಡಳಿತಾಕಾರಿ, ಬಂಟ್ವಾಳ ಉಪತಹಶೀಲ್ದಾರ್ ಎನ್.ಪರಮೇಶ್ವರ ನಾಯ್ಕ , ಮುಖ್ಯ ಕಾರ್ಯನಿರ್ವಹಣಾಕಾರಿ ವೇದವ, ಗ್ರಾಮಣಿ ಗಣಪತಿ ಮುಚ್ಚಿನ್ನಾಯ ಹಾಗೂ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದರು.

5

6 (1)

7

 

 

pkt1ಕ್ಯಾಪ್ಷನ್: ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ದೈವೀವನವನ್ನು ಉದ್ಘಾಟಿಸಿ ಮಾತನಾಡಿದರು.

pkt2
ಪ್ರಕೃತಿ ಪ್ರತ್ಯಕ್ಷ ದೇವರಾಗಿದ್ದು ದೈವೀವನ ನಿರ್ಮಾಣದ ಮೂಲಕ ಧರ್ಮದ ಪರಿಕಲ್ಪನೆಯಲ್ಲಿ ಕಾಡನ್ನುಳಿಸುವ ಪ್ರಯತ್ನ ನಡೆಸಲಾಗಿದೆ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಅರಣ್ಯ ಇಲಾಖೆ ವತಿಯಿಂದ ಸುಮಾರು 40 ಲ.ರೂ. ವೆಚ್ಚದಲ್ಲಿ ನಿಮರ್ಿಸಲಾದ ದೈವೀವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕಾಡು ನಾಶವಾದರೆ ಪರಿಸರಕ್ಕೆ ಹಾನಿ ಎಂಬುದನ್ನು ಎಲ್ಲರೂ ಅರ್ಥ್ಯೆಸಿಕೊಳ್ಳಬೇಕಾಗಿದೆ. ಪ್ರಕೃತಿದತ್ತ ಕೊಡುಗೆಗಳನ್ನು ನೆನಪಿಸಿಕೊಂಡು ಉಳಿಸಿಕೊಳ್ಳಬೇಕಾಗಿದೆ. ದೈವಿಕ ವಾತಾವರಣದಲ್ಲಿ ಜನರ ಸದ್ಭಾವನೆಗೆ ಪೂರಕವಾಗಿ ದೈವೀವನವನ್ನು ನಿರ್ಮಿಸಲಾಗಿದೆ. ಇವುಗಳನ್ನು ಕೇವಲ ಸಾಂಕೇತಿಕವಾಗಿ ತಿಳಿದುಕೊಳ್ಳದೆ ಪ್ರತ್ಯಕ್ಷವಾಗಿ ಪ್ರಯೋಜನ ಪಡೆಯುವಂತಾಗಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಸಚಿವರು ಸ್ತೋತ್ರವನ ,ವನಭೋಜನ ಗುಹೆ , ನವಗ್ರಹ ವನ , ರಾಶಿವನ, ಮೂಲಿಕಾವನ, ತುಳಸೀವನ ಗಳನ್ನು ಉದ್ಘಾಟಿಸಿದರು.

ಈ ವೇಳೆ ವಿವಿಧ ಔಷಯ ಸಸ್ಯಗಳನ್ನು ವಿತರಿಸಲಾಯಿತು. ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಕಾರಿ ಕಿಶನ್ ಸಿಂಗ್ ಸುಗಾರ್, ದ.ಕ.ಅಪರ ಜಿಲ್ಲಾಕಾರಿ ಶ್ರೀಪ್ರಭು, ಅರಣ್ಯ ಜಾಗೃತದಳ ಡಿಸಿಎಫ್ ಸದಾಶಿವ ಭಟ್, ಎಸಿಎಫ್ ಎ.ಎಸ್.ಅಬ್ಬಾಸ್, ಆಡಳಿತಾಕಾರಿ ಪರಮೇಶ್ವರ ನಾಯ್ಕ , ಕಾರ್ಯನಿರ್ವಹಣಾಕಾರಿ ವೇದವ, ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ , ತಾ.ಪಂ.ಉಪಾಧ್ಯಕ್ಷೆ ವಿಲಾಸಿನಿ, ಸದಸ್ಯ ಬಿ.ಪದ್ಮಶೇಖರ ಜೈನ್, ಮಾಜಿ ಅಧ್ಯಕ್ಷ ಸುದರ್ಶನ ಜೈನ್, ಕಾವಳಪಡೂರು ಗ್ರಾ.ಪಂ. ಪ್ರಭಾರ ಅಧ್ಯಕ್ಷ ಅಬ್ದುಲ್ ರಝಾಕ್, ಕಾವಳಮೂಡೂರು ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಸಾಹೇಬ್, ಅರಣ್ಯ ಇಲಾಖೆ ಸುಳ್ಯ ಉಪವಿಭಾಗ ಎಸಿಎಫ್ ಡಾ|ದಿನೇಶ್, ಉಡುಪಿ ಅರಣ್ಯ ಜಾಗೃತ ದಳ ಎಸಿಎಫ್ ಶೀನ ಕೊಟ್ಟಾರಿ, ಬೆಳ್ತಂಗಡಿ ಅರಣ್ಯಾಕಾರಿ ಸುಂದರ ಶೆಟ್ಟಿ , ಪಂಜ ಅರಣ್ಯಾಕಾರಿ ಪ್ರವೀಣ್ ಶೆಟ್ಟಿ , ಬಂಟ್ವಾಳ ಅರಣ್ಯಾಕಾರಿ ಎನ್. ಸುಬ್ರಹ್ಮಣ್ಯ ರಾವ್, ಉಪ ಅರಣ್ಯಾಕಾರಿ ಕೆ.ಎ.ಮ್ಯಾಥ್ಯು , ಅರಣ್ಯರಕ್ಷಕ ಲಕ್ಷ್ಮಿನಾರಾಯಣ ಉಪಸ್ಥಿತರಿದ್ದರು.
ಉಪ ಅರಣ್ಯ ಸಂರಕ್ಷಣಾಕಾರಿ ಡಾ|ಕೆ.ಟಿ. ಹನುಮಂತಪ್ಪ ಅವರು ಸ್ವಾಗತಿಸಿದರು. ಮುಖ್ಯ ಅರಣ್ಯ ಸಂರಕ್ಷಣಾಕಾರಿ ಡಾ|ಸಂಜಯ ಎಸ್. ಬಿಜೂರ್ ಪ್ರಸ್ತಾವಿಸಿದರು. ಪಿ.ಜಿನರಾಜ ಆರಿಗ ವಂದಿಸಿದರು. ಶಿಕ್ಷಣ ಸಂಯೋಜಕ ಕೃಷ್ಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಕ್ಷೇತ್ರದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ
ಶ್ರೀ ಕ್ಷೇತ್ರ ಕಾರಿಂಜವನ್ನು ಪ್ರವಾಸಿಧಾಮವನ್ನಾಗಿಸುವ ನಿಟ್ಟಿನಲ್ಲಿ ಈ ಹಿಂದೆ ಅಜೀರ್ಣವಸ್ಥೆಯಲ್ಲಿದ್ದ ಕೆರೆಯನ್ನು ಸಣ್ಣ ನೀರಾವರಿ ಯೋಜನೆಯಲ್ಲಿ 1 ಕೋ.ರೂ.ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ವಿವಿಧ ಅನುದಾನಗಳಿಂದ ಮೆಟ್ಟಿಲು, ಪಾರ್ವತಿ ದೇವಸ್ಥಾನದ ವರೆಗೆ ಹಿಂಬದಿ ರಸ್ತೆ ನಿರ್ಮಿಸಿ ಡಾಮರೀಕರಣಗೊಳಿಸಲಾಗಿದೆ. ಇದಕ್ಕೆ ಪಿ.ಜಿನರಾಜ ಆರಿಗರ ಶ್ರಮ ಅಭಿನಂದನೀಯ ಎಂದ ಅವರು ಶೀಘ್ರದಲ್ಲಿ ದೇವಸ್ಥಾನದ ಮೂಲಸ್ಥಿತಿಯನ್ನುಳಿಸಿಕೊಂಡು 50 ಲ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿ ಬ್ರಹ್ಮಕಲಶೋತ್ಸವ ನಡೆಸಲು ಸೂಚಿಸಲಾಗಿದೆ. ತಾಲೂಕಿನ ವೀರಕಂಭದಲ್ಲಿ ಸ್ವಾಭಾವಿಕವಾಗಿ ಬೆಳೆದ ಶ್ರೀ ಗಂಧದ ಮರಗಳನ್ನು ತಂತಿಬೇಲಿ ಹಾಕಿ ಕಾವಲುಗಾರರ ರಕ್ಷಣೆಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಬಂಟ್ವಾಳ ಪ್ರವಾಸಿ ಬಂಗಲೆಯಲ್ಲಿ ತೋಟಗಾರಿಕಾ ಇಲಾಖಾ ಸಹಯೋಗದಲ್ಲಿ 3 ಕೋ.ರೂ. ವೆಚ್ಚದಲ್ಲಿ ಟ್ರೀ ಪಾರ್ಕ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ

By Suddi9

Leave a Reply

Your email address will not be published. Required fields are marked *