ಬಂಟ್ವಾಳ : ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜಿಪ ಮುನ್ನೂರು ಇದರ ನೂತನ ಶಿಲಾಮಯ ಗರ್ಭಗುಡಿ, ತೀರ್ಥಮಂಟಪ , ಸುತ್ತುಪೌಳಿ , ತೀರ್ಥಬಾವಿ ಮತ್ತು ಸಭಾಭವನ ನಿರ್ಮಾಣಗೊಂಡು 22-02-2015 ರಿಂದ 27-02-2015 ರ ತನಕ ಜರಗುವ ನವೀಕರಣಃ ಪುನಃ ಪ್ರತಿಷ್ಟಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸದ ಅಂಗವಾಗಿ ತಾ.16-02-2015 ರಂದು ಶುಭಮುಹೂರ್ತದಲ್ಲಿ ವಿಧಿಪೂರ್ವಕವಾಗಿ ಚಪ್ಪರ ಮುಹೂರ್ತ ಜರಗಿತು.ಶ್ರೀ ನಂದಾವರ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ,ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಟಿ.ಸುಬ್ರಾಯ ಕಾರಂತ ಕಂಬ ನೆಡುವ ಮೂಲಕ ಚಾಲನೆ ನೀಡಿದರು . ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಮಮಜಲ್ಪಾದೆ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎಂ.ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು . ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜಯಶಂಕರ ಬ್ರಾಸಿತ್ತಾಯ ಅದ್ರುಕ್ಕು , ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಸ್ಕಾ ್ಯಡ್ಸ್ ಮಂಗಳೂರು ಇದರ ಅಧ್ಯಕ್ಷರಾದ ರವೀಂದ್ರ ಕಂಬಳಿ , ಆಡಳಿತ ಮಂಡಳಿ ಸದಸ್ಯರಾದ ದೇವಪ್ಪ ಮಡಿವಾಳ , ಎಸ್.ಕೆ.ಶಿವ , ಚಿತ್ರಾ.ಎಸ್.ರೈ , ಕೃಷ್ಣ ಭಟ್ , ಹರಿಪ್ರಸಾದ್ ಭಂಡಾರಿ , ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಪಿ.ಧನಂಜಯ ಶೆಟ್ಟಿ , ಎ.ಧನೇಶ್ವರ ರಾವ್ , ಸ್ವಾಗತ ಸಮಿತಿ ಸದ್ಯರಾದ ಎ.ಉಮೇಶ್ ರಾವ್ , ನಾಡಾರ್ ಶಶೀಧರ್ ಹೊಳ್ಳ ಬೊಂಡಂತಿಲ , ಚಪ್ಪರ ಸಮಿತಿ ಸಂಚಾಲಕ ಎನ್.ರಾಮ ಮಡಿವಾಳಪಡ್ಪು , ಸಂಜೀವ ಶಾಂತಿನಗರ , ಸೋಮನಾಥ ಬಿ.ಎಂ. , ದಾಮೋದರ , ಶರತ್, ಶಣ್ಮುಖ , ಯುವಕ ಸಂಘದ ಪದಾಧಿಕಾರಿಗಳಾದ ದೀಕ್ಷಿತ್ , ಪ್ರಸಾದ್ , ವಿನೋದ್ , ಬ್ರಹ್ಮಕಲಶೋತ್ಸವ ಸಮಿತಿಯ ಉಪಕಾರ್ಯದರ್ಶಿ ಹರೀಶ್ ಗಟ್ಟಿ ಮುಂತಾದವರು ಉಪಸ್ಥಿತರಿದ್ದರು.

