ನವದೆಹಲಿ: ಇದೀಗ ಪರಸ್ಪರ ಸಂದೇಶ ರವಾನೆ, ಚಾಟಿಂಗ್ ಎಲ್ಲವೂ ವಾಟ್ಸಾಪ್ ಮೂಲಕವೇ ನಡೆಯುತ್ತಿರುವಾಗ ವಾಟ್ಸಾಪ್ ಕೂಡಾ ಹೊಸ ಹೊಸ ಬದಲಾವಣೆಗಳ ಮೂಲಕ ಜನಸ್ನೇಹಿಯಾಗುತ್ತಿದೆ. ಹಲವಾರು ವೈಶಿಷ್ಟ್ಯಗಳಿಂದ ಕೂಡಿದ ವಾಟ್ಸಾಪ್‌ನಲ್ಲಿ ದೊಡ್ಡ ಸೈಜ್‌ನ ವೀಡಿಯೋಗಳನ್ನು ಕಳುಹಿಸಿವುದು ಕಷ್ಟವಾಗುತ್ತಿತ್ತು. ಆದರೆ ಈಗ 16 ಒಃ ಗಾತ್ರದ ಫೈಲ್‌ಗಳನ್ನೂ ವಾಟ್ಸಾಪ್‌ನಲ್ಲಿ ಶೇರ್ ಮಾಡಬಹುದಾಗಿದೆ.

ವಾಟ್ಸಾಪ್ ವೀಡಿಯೋ ಆಪ್ಟಿಮೈಜರ್ ಎಂಬ ಈ ಅಪ್ಲಿಕೇಶನ್‌ನಿಂದಾಗಿ ದೊಡ್ಡ ಗಾತ್ರದ ಫೈಲ್ (ಸಿನಿಮಾ ಕೂಡಾ) ವಾಟ್ಸಾಪ್‌ನಲ್ಲಿ ಕಳುಹಿಸಬಹುದು.
ಈ ಆ್ಯಪ್ ವೀಡಿಯೋ ಫೈಲ್‌ಗಳನ್ನು ಕಂಪ್ರೆಸ್ ಮಾಡಿ ವಾಟ್ಸಾಪ್ ನಲ್ಲಿ ಕಳುಹಿಸಲು ಸಾಧ್ಯವಾಗುವ ಸೈಜ್‌ಗೆ ಹೊಂದಿಸಲು ರೆಸಲ್ಯೂಷನ್‌ನ್ನು ಕಡಿಮೆ ಮಾಡಲಾಗುತ್ತದೆ.
ವಾಟ್ಸಾಪ್ ವೀಡಿಯೋ ಆಪ್ಟಿಮೈಜರ್‌ನ ವಿಶೇಷತೆಗಳು
ಒಂದು ಮತ್ತು ಒಂದಕ್ಕಿಂತ ಹೆಚ್ಚು ವೀಡಿಯೋವನ್ನು ಒಂದೇ ಹೊತ್ತಿಗೆ ಕನ್ವರ್ಟ್ ಮಾಡುತ್ತದೆ
ಕನ್ವರ್ಶನ್ ಆದ ಫೈಲ್‌ಗಳನ್ನು ನೇರವಾಗಿ ಶೇರ್ ಮಾಡಬಹುದು
ಆ್ಯಪ್ ಮೂಲಕ ನೇರವಾಗಿ ವೀಡಿಯೋ ರೆಕಾರ್ಡ್ ಮಾಡಬಹುದು
ಎನ್‌ಕೋಡಿಂಗ್ ಸ್ಪೀಡ್ ಆಯ್ಕೆಗೆ ಆಪ್ಶನ್
ವೀಡಿಯೋ ಕನ್ವರ್ಶನ್‌ಗೆ ತಕ್ಕುದಾದ ಸ್ಪೀಡ್
ವಾಟ್ಸಾಪ್ ವೀಡಿಯೋ ಆಪ್ಟಿಮೈಜರ್ 1.0.0.1 ಆಕಿಕ್ಗಿ ಫೈಲ್ ಈಗ ಉಚಿತವಾಗಿ ಲಭ್ಯವಿದ್ದು, ವಿಂಡೋಸ್ ಫೋನ್‌ಗಷ್ಟೇ ಸೀಮಿತವಾಗಿದೆ. ಆ್ಯಂಡ್ರಾಯಿಡ್ ಫೋನ್‌ಗಳಲ್ಲಿ ಈ ಸೌಲಭ್ಯ ಸಿಗಲು ಸದ್ಯ ಕಾಯಬೇಕಾಗಿದೆ.
