ಲೂದಿಯಾನ : ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿಯನ್ನು ವಿಶ್ವ ಹಿಂದು ಪರಿಷತ್ ಕೊಂಡಾಡಿದೆ. ಪ್ರಧಾನಿಯವರ ಕೆಲಸಗಳನ್ನು ಶ್ಲಾಘಿಸಿದ ವಿ.ಹೆಚ್.​ಪಿ ಮುಖ್ಯಸ್ಥರು, ನರೇಂದ್ರ ಮೋದಿಯವರಿಗೆ ಕೆಲಸ ಮಾಡಲು ಬಿಡಿ ಅಂತಾ ಸಂಘ ಪರಿವಾರದ ನಾಯಕರಿಗೆ ತಾಕೀತು ಮಾಡಿದ್ದಾರೆ.

modಲೂದಿಯಾನದಲ್ಲಿ ವಿ.ಹೆಚ್.​ಪಿ ಅಂತರಾಷ್ಟ್ರೀಯ ಅಧ್ಯಕ್ಷ ರಾಘವ ರೆಡ್ಡಿ ಈ ಎಚ್ಚರಿಕೆಯನ್ನು ನೀಡಿದ್ದಾರೆ. ಮೋದಿಯವರಿಗೆ ಕೆಲಸ ಮಾಡಲು ಬಿಡಿ, ಇಲ್ಲ ಸಲ್ಲದ ರಗಳೆ ಮಾಡಿ ಅವರಿಗೆ ಸಂಕಷ್ಟ ತಂದೊಡ್ಡಬೇಡಿ ಎಂದು ರಾಘವ ರೆಡ್ಡಿ ಹೇಳಿದ್ದಾರೆ. ತುಂಬಾ ದಿನಗಳ ನಂತರ ಸರ್ಕಾರ ಭಾರತದ ಹಿಂದು ಸಂಸ್ಕೃತಿ ಬಗ್ಗೆ ತಿಳಿದಿದೆ ಎಂದು ರಾಘವ ರೆಡ್ಡಿ ಹೇಳಿದ್ದಾರೆ. ಪ್ರಧಾನಿ ಮೋದಿಯವರು ಮುಂದಿನ ದಿನಗಳಲ್ಲಿ ಭಾರತದ ಕನಸನ್ನು ನನಸು ಮಾಡಿ ಅಭಿವೃದ್ಧಿಯತ್ತ ಕೊಂಡೊಯ್ಯಲಿದ್ದಾರೆ ಎಂದಿದ್ದಾರೆ. ಇದೇ ವೇಳೆ ಮೋದಿಯವರು ದೇಶದ ಜನರ ಸಂಸ್ಕೃತಿ ಮತ್ತು ನಂಬಿಕೆಗಳ ಬಗ್ಗೆ ತಿಳಿದಿರುತ್ತಾರೆ ಎಂದೂ ಹೇಳಿದರು.

By suddi9

Leave a Reply

Your email address will not be published. Required fields are marked *