ಉಳ್ಳಾಲ: ತೊಕ್ಕೊಟ್ಟು ರೈಲ್ವೇ ಸ್ಟೇಷನ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮುನೀರ್ ಆಲಿಯಾಸ್ ವಿನೋದ್ ಆಲಿಯಾಸ್ ಪಂಚು (32) ಉಳ್ಳಾಲ ಪೊಲೀಸರು ಬಂದಿಸಿದ್ದು, ಸುಮಾರು ಒಂದು ಕೆ.ಜಿ.ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ರೈಲ್ವೇ ಸ್ಟೇಷನ್ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಡಿಕೇರಿ ವಿರಾಜ ಪೇಟೆ ನಿವಾಸಿ ಪ್ರಸ್ತುತ ದೇರಳಕಟ್ಟೆಯ ನಿವಾಸಿಯಾಗಿರುವ ಮುನೀರ್ ಆಲಿಯಾಸ್ ವಿನೋದ್ ತೆಂಗಿನ ಕಾಯಿ ವ್ಯಾಪಾರದೊಂದಿಗೆ ಗಾಂಜಾ ವ್ಯಾಪಾರ ನಡೆಸುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ತೊಕ್ಕೊಟ್ಟು ರೈಲ್ವೇ ಸ್ಟೇಷನ್ ಬಳಿ ಇನ್ಸ್ಪೆಕ್ಟರ್ ಸವಿತ್ರತೇಜ ಅವರ ನೇತೃತ್ವದಲ್ಲಿ ಪಿಎಸ್ಐಗಳಾದ ಭಾರತಿ, ಅಪರಾಧ ಪತ್ತೇ ದಳದ ರಾಜೇಂದ್ರ ಬಿ., ಎಎಸ್ಐ ವಿಜಯರಾಜ್, ಮೋಹನ್ದಾಸ್, ಎಚ್ಸಿಗಳಾ ಮೋಹನ್, ಅರುಣ್, ಸಿಬ್ಬಂದಿಗಳಾದ ಲಿಂಗರಾಜು, ಕಮಲಾಕ್ಷ, ಮಹೇಶ್ ರವೀಂದ್ರ ಅವರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದರು.
