Samurai Hights KaikambaSamurai Hights Kaikamba

ಸುದ್ದಿ9 ಕೈಕಂಬ;
ಮಂಗಳೂರು, ಮಾ.16: ಗುರುಪುರ ಕೈಕಂಬದಲ್ಲಿ ಬಳಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡಿರುವ ಸಮೂರ ಹೈಲೈಟ್ಸ್ ಮತ್ತು ಬಿ.ಎಸ್. ಟವರ್ ಎಂಬ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ಉದ್ಧಾಟನೆ ಕಾರ್ಯಕ್ರಮ ಇಂದು ನಡೆಯಿತು.
ಶಾಸಕ ಮೊಯ್ದಿನ್ ಬಾವಾ ಕಟ್ಟಡಗಳ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ನಗರ ಪ್ರದೇಶಕ್ಕೆ ಕಡಿಮೆ ಇಲ್ಲದಂತೆ ತ್ವರಿತಗತಿಯಲ್ಲಿ ಅಭಿವೃದ್ದಿ ಹೊಂದುತ್ತಿರುವ ಕೈಕಂಬದಲ್ಲಿ ಅಷ್ಟೇ ಸುಸಜ್ಜಿತ ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳು ನಿರ್ಮಾಣಗೊಳ್ಳುತ್ತಿದ್ದು, ಸಮೂರ ಹೈಲೈಟ್ಸ್ ಮತ್ತು ಬಿ.ಎಸ್.ಟವರ್ ಕೈಕಂಬಕ್ಕೆ ಶೋಭೆಯಂತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಬುಲ್ವಫಾ ಖಾಸೀಂ ಮುಸ್ಲಿಯಾರ್, ಸೂರಲ್ಪಾಡಿ ಮಸೀದಿಯ ಖತೀಬ್ ಮುಹಮ್ಮದ್ ಇಸ್ಮಾಯೀಲ್ ದಾರಿಮಿ ದುಆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾದರಾದ ಮುಹಮ್ಮದ್ ಅಮೀರ್, ಎ.ಆರ್. ಜುಬೈರ್, ರಫಿಕ್ ಸಮೋರಾ ಮತ್ತು ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
ಕೈಕಂಬ ಜಂಕ್ಷನ್ ಸಮೀಪ, ಹೆದ್ದಾರಿಗೆ ಹೊಂದಿಕೊಂಡು ನಿರ್ಮಾಣಗೊಂಡಿರುವ ಸಮೂರ ಹೈಲೈಟ್ಸ್ ಮತ್ತು ಬಿ.ಎಸ್. ಟವರ್ ಎಂಬ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಎಲ್ಲ ಆಧುನಿಕ ಸೌಲಭ್ಯಗಳನ್ನೂ ಅಳವಡಿಸಿಲಾಗಿದೆ. ಪ್ರಾರ್ಥನಾ ಸ್ಥಳಗಳು ಮತ್ತು ಶಿಕ್ಷಣ ಸಂಸ್ಥೆಗಳೂ ಸನೀಹದಲ್ಲಿಯೇ ಇವೆ. ಪಿಲಿಕುಳ ನಿಸರ್ಗಧಾಮದಂತಹ ಪ್ರವಾಸಿ ತಾಣ ಇಲ್ಲಿಂದ ಅಣತಿ ದೂರದಲ್ಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Samurai Hights Kaikamba
Samura Hights Kaikamba

16 v 4

16 2

 

By suddi9

Leave a Reply

Your email address will not be published. Required fields are marked *