ಸುದ್ದಿ 9 ಪೊಳಲಿ ; ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವ ಮಾರ್ಚ್ 14ರಂದು ಪ್ರಾರಂಭಗೊಂಡು 29 ದಿನಗಳ ಜಾತ್ರೆ ನಡೆಯಲಿದೆ ಮಾರ್ಚ 15ರಂದು ಬೆಳಗ್ಗೆ ದೀಪದ ಬಳಿ ಕಂಚಿಲು ಸೇವೆ ನಡೆದು ರಥೋತ್ಸವ ನಡೆಯಿತು . ನಂತರ ನಟ್ಟೋಜರು ಹಿಂಗಾರದ ಹಾಳೆಯೊಂದಿಗೆ ದುರ್ಗಾ ದೇವಿ ಗುಡಿಯ ಹಿಂಬದಿಯಲ್ಲಿ ಸೇರಿಗಾರನ ಕೈಯಲ್ಲಿ ಕೊಟ್ಟು ಸೆರಿಗಾರನ ಕಿವಯಲ್ಲಿ ಆರಢದ ದಿನವನ್ನು ತಿಳಿಸುತ್ತಾರೆ. ನಂತರ ಸೇರಿಗಾರನು ಗೋಪುರದಲ್ಲಿ ಸೋಮಕಾಸುರ ಮತ್ತು ರಂಜಕಾಸುರನ ವೇಷದಲ್ಲಿ ಗೋಪುರದಲ್ಲಿ ನರ್ತನ ಮಾಡುವಾಗ ಸೇರಿಗಾರನು ಹಿಂಗಾರದ ಹಾಳೆಯನ್ನು ಪಂಬದನ ಕೈಯಲ್ಲಿ ಕೊಟ್ಟು ಕಿವಿಯಲ್ಲಿ ಆರಡದ ದಿನವನ್ನು ತಿಳಿಸುತ್ತಾನೆ.
ಆಗ ಸಾವಿರ ಸೀಮೆಯ ಭಕ್ರರು ಅಮ್ಮನವರ ಜಾತ್ರೆಯ ದಿನ ತಿಳಿದುಕೊಲ್ಲಲು ಬಹಳ ಕುತುಹಲದಿಂದ ಗೊಪುರದಲ್ಲಿ ಕಾದು ಕುಳಿತ್ತಿರುತ್ತಾರೆ. ಆಗ ಪಂಬದನು ಮೂರು ಬಾರಿ ಕೂಗಿದ ಇರುವತ್ತೊರೊಂಭ ಪೋಪಿನಾನಿ ಆರಡ ಅಂತ ತುಳುವಿನಲ್ಲಿ ಜೋರಾಗಿ ಕರೆಯುತ್ತಾನೆ ಈಗೆ ಪೊಳಲಿ ಜಾತ್ರೆಯ ಒಂದು ತಿಂಗಳ ಜಾತ್ರೆಯ ಗೌಪ್ಯವಾಗಿಡಲಾದ ದಿನವನ್ನು ಗೊತ್ತುಮಾಡುತ್ತಾರೆ. ಈ ಸಲ 29 ದಿನದ ಜಾತ್ರೆ ನಡೆಯಲಿದೆ ಏಪ್ರಿಲ್ 6ರಂದು ಭಾನುವಾರ ಪ್ರಥಮ ಚೆಂಡು,7ರಂದು ಸೋಮವಾರಎರಡನೆ ಚೆಂಡು, 8ರಂದು ಮಂಗಳವಾರ ಮೂರನೆ ಚೆಂಡು, 9ರಂದು ಬುಧವಾರ ನಾಲ್ಕನೇ ಚೆಂಡು, 10 ರಂದು ಗುರುವಾರ ಕಡೆ ಚೆಂಡು, 11 ರಂದು ಶುಕ್ರವಾರ ರಥೋತ್ಸವ ನಡೆಯಲಿದೆ.12ರಂದುಶನಿವಾರ ಆರಡ







