ಸುದ್ದಿ9 ಬಂಟ್ವಾಳ; ದೇಶದ ಅಭಿವೃದ್ದಿ ಹಾಗೂ ಭದ್ರತೆಯ ದೃಷ್ಟಿಯಿಂದ ನರೇಂದ್ರ ಮೋದಿ ಪ್ರಧಾನಿಯಾಗಬೇಕಾದ ಅನಿವಾರ್ಯತೆಯಿದ್ದು, ಈ ನಿಟ್ಟಿನಲ್ಲಿ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರು ನಿರಂತರ ಶ್ರಮವಹಿಸಬೇಕಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್ ಕರೆ ನೀಡಿದ್ದಾರೆ.

ಸಂಗಬೆಟ್ಟು ಬಿಜೆಪಿ ಶಕ್ತಿಕೇಂದ್ರದ ಆಶ್ರಯದಲ್ಲಿ ಸಿದ್ದಕಟ್ಟೆ ಅಶ್ವಿನಿ ಸಭಾಂಗಣದಲ್ಲಿ ನಡೆದ ಬೂತ್ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೇಸ್ ನಾಯಕರು ಕಲ್ಲಡ್ಕದಂತಹಾ ಸೂಕ್ಷ್ಮ ಪ್ರದೇಸದಲ್ಲಿ ಹಿಂದೂ ನಾಯಕರನ್ನು ನಿಂದನೆ ಮಾಡುವ ಮೂಲಕ ಸಾಮಾಜಿಕ ಅಶಾಂತಿಗೆ ಕಾರಣರಾಗುತ್ತಿರುವುದು ಖಂಡನೀಯ ಎಂದರು. ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕೆ ಶ್ರೀಮತಿ ಸುಲೋಚನಾ ಭಟ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ರಾಜೇಶ್ ನಾಯಕ್ ಉಳಿಪಾಡಿಗುತ್ತು, ಪಕ್ಷದ ಪ್ರಮುಖರಾದ ದೇವದಾಸ ಶೆಟ್ಟಿ. ದೇವಪ್ಪ ಪೂಜಾರಿ, ರಾಮದಾಸ ಬಂಟ್ವಾಳ, ಪುರುಷ ಸಾಲ್ಯಾನ್, ನಳಿನಿ ಶೆಟ್ಟಿ ವಸಂತ ಅಣ್ಣಳೀಕೆ, ರೇವತಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು

