ಸುದ್ದಿ 9 ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಬಂಟ್ವಾಳ-ಬೆಳ್ತಂಗಡಿ ರಸ್ತೆಯಲ್ಲಿ ಬರುವ ಬಂಟ್ವಾಳ ಬೈಪಾಸ್ ಜಂಕ್ಷನ್ ಸಮೀಪದ ಮೋರಿಯ ಬಳಿ ಹಾಗೂ ಹೊಸ್ಮಾರು ಸಮೀಪದ ಅಂಗನವಾಡಿ ಕೇಂದ್ರದ ಬಳಿ ಪಾದಾಚಾರಿ ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ರಸ್ತೆ ನುಂಗಿ ಹಾಕಿದ್ದು ಪಾದಾಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತ ಪರಿಸ್ಥಿತಿ ನಿಮರ್ಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಇದೇ ಪರಿಸ್ಥಿತಿ ಮುಂದುವರಿದುಕೊಂಡು ಬಂದಿದ್ದು ಇಲಾಖೆಗೆ ಸಂಬಂಧಪಟ್ಟವರು ಪಾದಾಚಾರಿ ದಾರಿಯನ್ನು ಬಿಡದೆ ರಸ್ತೆ ನಿಮರ್ಾಣ ಡಾಮರೀಕರಣ ನಡೆಸಿರುವುದರಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದ್ದಾರೆ.

rasthe (1)ತೀರಾ ಅವೈಜ್ಞಾನಿಕವಾಗಿ, ಯಾವುದೇ ಮುಂದಾಲೋಚನೆ ಇಲ್ಲದೆ ಕಾಮಗಾರಿ ನಡೆಸಿರುವುದು ಅಪಾಯದ ಪರಿಸ್ಥಿತಿಗೆ ಕಾರಣ ಎಂದು
ಹೇಳಲಾಗಿದೆ. ಇದೇ ರಸ್ತೆಯಲ್ಲಿ ದಿನನಿತ್ಯ ನೂರಾರು ಜನರು, ವಿದ್ಯಾಥರ್ಿಗಳು, ಪುಠಾಣಿ ಮಕ್ಕಳು ಪ್ರಮುಖವಾಗಿ ಇಲ್ಲಿಯ ಪಕ್ಕದ ಅಂಗನವಾಡಿ ಕೇಂದ್ರದ ಪುಠಾಣಿ ಮಕ್ಕಳು ಸಂಚರಿಸುತ್ತಿದ್ದು ವೇಗವಾಗಿ ಚಲಿಸುತ್ತಿರುವ ವಾಹನಗಳು ಕಾಲುದಾರಿಯನ್ನು ಬಿಡದೆ ಸಂಚರಿಸುತ್ತಿರುವುದರಿಂದ ಜೀವ ಕೈಯಲ್ಲಿ ಹಿಡಿದು ನಡೆದಾಡುವಂತಾಗಿದೆ. ಸಂಬಂ`ಪಟ್ಟ ಇಲಾಖೆಯವರು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *